ಗರ್ಭ ಗುಡಿ [Episode - 1]

              ಕಾಲ ಚಕ್ರ ತೀರಗತಿರತದ. ಇವತ್ತ ನಗಲಿಕತ್ತವರು ನಾಳೆ ಅಳತಾರ ಮತ್ತ ಅಳಕೋತ ಕೂತವರಿಗೆ ನಾಳೆ ನಗಹಂಗ ದೇವರು ಮಾಡತಾನ.  ನಮ್ಮ ಕೈಯ್ಯಾಗ ಏನೂ ಇಲ್ಲ! ಎಲ್ಲ ಭಗವಂತನಾಟ ಸಂಗಣ್ಣ ಅಂತ ತುಂಬು ಗರ್ಭಿಣಿ ಶಾಂತಾ ಕಟ್ಟಿಮೇಲೆ ಕೂತಕೊಂಡು ಮನಿ ಆಳಮಗ ಸಂಗಣ್ಣನ ಜೊತಿ ಮಾತಾಡ್ಕೋತ ಕೂತಾಳ. ಶಾಂತಾ ಹೆಸರಿಗೆ ತಕ್ಕಹಂಗ ಶಾಂತಾ ಸ್ವಭಾವದ ಹೆಣ್ಣು. ಸಣ್ಣಕಿ ಇದ್ದಾಗ ತಾಯಿ ಕಳಕೊಂಡು ಅಪ್ಪನ ಮಗಳಾಗಿ ಬೆಳದಕಿಗೆ ತವರಮನಿ ಅಂದ್ರ ಖರೇನ ಏನಂತ ಗೊತ್ತಿಲ್ಲ. ಎರಡನೇ ಲಗ್ನ ಆದ್ರ ಮಗಳ ಮ್ಯಾಲೆ ಎಲ್ಲಿ ಪ್ರೀತಿ ಕಡಿಮಿ ಆಗ್ತದ ಅಂತ ವೆಂಕಣ್ಣ ಮಾಸ್ತರೂ ಹೆದರಿ ಎರಡನೇ ಲಗ್ನದ ಉಸಾಬರಿಗೆ ಹೋಗ್ಲಿಲ್ಲ. ಮಗಳಿಗೆ ಅಪ್ಪ, ಅಪ್ಪಗ ಮಗಳು ಅಂತ ಜೀವನ ಹಾಕಿಕೊಂಡು ಬಂದಿದ್ರು ಇಬ್ಬರು. ಮಾಸ್ತರಕಿ ನೌಕರಿಯೊಳಗ ಸಿಗ ೧೦೦ ರೂಪಾಯಿ ಪಾಗಾರದಾಗ ಮನಿ ಕಟ್ಕೊಂಡು ಎಲ್ಲೂ ಸಾಲ ಮಾಡದಹಂಗ ಜೀವನ ಮಾಡ್ಕೊಂಡು ಬಂದವರು ನಮ್ಮ ವೆಂಕಣ್ಣ ಮಾಸ್ತರು. ಕಟ್ಟಿದ ಮನಿಯಾದ್ರು ನಿಮ್ಮ ವಾರ್ಸಾದರ ಮಗಗ ಕೊಟ್ಟು ಹೋಗ್ಲಿಕ್ಕಾದ್ರೂ ಎರಡನೇ ಲಗ್ನ ಮಾಡ್ಕೋರಿ ಸರ.... ಅಂದವರ ಮಾತು ಕಿವಿಗೆ ಹಕ್ಕೋಲಾರ್ದ ತಾನೇನು, ತನ್ನ ಮನಿ ಏನು ಅಂತ ಇರ್ತಿದ್ರೂ ವಿಧಿ ಬಿಡಬೇಕಲ್ಲ, ಹೆಂಡತಿ ಸತ್ತು ಮೊದಲ ಜೀವನದಾಗ ಖಿನ್ನ ಆಗಿದ್ದ ವೆಂಕಣ್ಣ ಮಾಸ್ತರಿಗೆ ವಯಸ್ಸಾಗ್ತಿದ್ದ ಮಗಳು ಇನ್ನ ದೊಡ್ಡಾಕಿ ಆಗವಳ್ಳು ಅಂತ ಇನ್ನೊಂದ್ ಕಡೆ ಖೇದ.

              ಊರಾಗ ಜನ ಕೇಳ ಪ್ರಶ್ನೆಗೆ ಉತ್ತರ ಕೊಡಲಿಕ್ಕೆ ಆಗದಹ0ಗ ಆಗಿತ್ತು ಮಾಸ್ತರಿಗೆ, ಆದ್ರ ಇದು ಯಾವಾಗ ಕ್ಲಿಷ್ಟ ಅಂತ ಅನಸ್ಲಿಕತ್ತೋ, ವೆಂಕಣ್ಣ ಮಾಸ್ತರು ತಮ್ಮ ಅಕ್ಕಗ ಪತ್ರ ಬರೀತಾರ.. "ಅಕ್ಕ ಈ ವಾರದಾಗ ನಮ್ಮನಿಗೆ ಬಾ ನಿನ್ನ ಹತ್ರ ಒಂದು ವಿಷಯ ಮಾತಾಡದದ" ಅಂತ ಅಷ್ಟ ಪತ್ರದಾಗ ಬರದು ಪೋಸ್ಟ್ ಮಾಡ್ತಾರ. ಸುಂದ್ರಕ್ಕಗ ಈ ಪಾತ್ರ ನೋಡಿ ಗಾಬರಿ ಆಗ್ತದ, ತಮ್ಮ ಏನಿದು ಇಷ್ಟ ಬರದಾನ ಪತ್ರದಾಗ! ವಿಷಯದ ಗಂಭೀರತೆ ಅರಿತ ಸುಂದ್ರಕ್ಕ ಮೂರು ನಾಲ್ಕು ದಿನದ ಬಟ್ಟಿ ಇಟ್ಕೊಂಡು ತಮ್ಮನ ಊರಿಗೆ ಹೋಗ್ತಾರಾ.

               ವೆಂಕಣ್ಣ ವೆಂಕಣ್ಣ ಎಲ್ಲಿದ್ದೀಯೋ .. ಆರಂ ಇದ್ದಿಹೌದಲ್ಲ ಅಂತ ಜೋರಾಗಿ ಅನ್ಕೋತ ಒಳಗ ಬಂದ ಸುಂದ್ರಕ್ಕ, ಮಾಸ್ತರ ಅಲ್ಲೇ ಮೂಲಿ ಒಳಗ ಚಹಾ ಕೂಡಕೋತ ಯೇನ ಯೋಚನೆ ಮಾಡ್ಕೋತ ಕೂತಿದ್ದು ನೋಡಿ! ಅಲ್ಲೋ ವೆಂಕಣ್ಣ ಏನಾತು ನಿನಗ ಹಿಂಗ ಯಾಕ ಬರದಿ ಪಾತ್ರದಾಗ, ಶಾಂತಾ ಏನಾರ ದೊಡ್ಡಾಕಿ ಆದಲೆನು ಅಂತ ಕೇಳ್ತಾರ ಸುಂದ್ರಕ್ಕ, ಮಾಸ್ತರು ಅಯ್ಯ ಅಕ್ಕ ಯಾವಾಗ ಬಂದೀ ನನಗ ಗೊತ್ತ ಆಗ್ಲಿಲ್ಲ ನೋಡು... ತಡಿ ಹೋಗಿ ಬಾಗಲ ಹಾಕಿ ಬರ್ತೀನಿ ಮತ್ತ ನಾವು ಮಾತಾಡೋದು ಯಾರರ ಕೇಳಸ್ಕೊಂಡು ಮಂಡಿಬಾಯಿಗೆ ನಮ್ಮ ಶಾಂತಾ ಆಹಾರ ಆಗ್ಬಾರ್ದು ಅಂತ.
 ಮಾಸ್ತರು ಭಡಕ್ಕನೆ ಎದ್ದು ಹೋಗಿ ಬಾಗಲ ಹಾಕಿಕೊಂಡು ಬಂದು ಅಕ್ಕನ ಕೈ ಹಿಡಿದು ಹೇಳ್ತಾರಾ... ಅಕ್ಕ ನನಗ ಏನು ಮಾಡ್ಬೇಕೊ ಗೊತ್ತಾಗವಲ್ದು, ನಮ್ಮ ಶಾಂತಾಗ ಈಗ ೧೫ ವರ್ಷ, ಅದ್ರ ಇನ್ನ ದೊಡ್ಡಾಕಿ ಆಗಿಲ್ಲ.. ಊರ ಹೆಣ್ಣಮಕ್ಕಳು ನನಗ ಕೇಳಿ ಕೇಳಿ ಸಾಯಿಸ್ಲಿಕತ್ತಾರ. ಏನ್ ಹೇಳದು ಅವರಿಗೆ ಅಂತ ಗೊತ್ತಾಗವಲ್ದು PUC ಮುಗಿದಮ್ಯಾಲೆ ಶಾಂತದು ಲಗ್ನ ಮಾಡಬೇಕು ಅನ್ಕೊಂದಿನಿ ಅದ್ರ ಶಾಂತಂದು ನೋಡಿದ್ರ ಹಿಂಗ! ನಾಯೆನ್ ಮಾಡ್ಲಿ ಹೇಳು ಅಂತ ಅನ್ಕೋತ ಕಣ್ಣಾಗಿನ ಎರಡು ಹನಿ ನೀರು ಸುಂದ್ರಕ್ಕನ ಕೈ ಮ್ಯಾಲೆ ಬಿಳ್ತಾವ!

         ಸುಂದ್ರಕ್ಕ: ಹುಚ್ಚು ಖೋಡಿ ಇದೇನು ಬಗಿಹರಿಲಾರದು ಸಮಸ್ಯೆ ಏನಲ್ಲ ತಗೋ! ನಮ್ಮ ಊರಾಗ ಒಬ್ಬಾತ ನಾಟಿ ವೈದ್ಯ ಬಂದಾನ. ಆತ ಮುಟ್ಟಿದ್ರ ಸಾಕು ಅದೆಷ್ಟೋ ಮಂದಿ ಆರಂ ಆಗಿ ಹೋಗ್ಯಾರ. ನಾಳೆನ ಕಲಾಸ್ಕೊದು ನನ್ನ ಜೊತಿ ಅಂತ ಸುಂದ್ರಕ್ಕ ಅಂತಿದ್ದ ಮಾತು ಕೇಳಿ ವೆಂಕಣ್ಣ ಮಾಸ್ತರಿಗೆ ಮರಭೂಮಿ ಒಳಗ ನೀರು ಸಿಕ್ಕಷ್ಟು ಖುಷಿ ಆತು.

ಮುಂದುವರೆಯುತ್ತದೆ ..................


Comments

Popular posts from this blog

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

ನಾನೂ ಫೇಮಸ್ ಆಗ್ಬೇಕಲ್ಲ!!

ಕನಸು ತಿರುಕನ ಕನಸಾಗದಿರಲಿ ...