Posts

Showing posts from 2017

ಗರ್ಭ ಗುಡಿ [Episode - 1]

Image
              ಕಾಲ ಚಕ್ರ ತೀರಗತಿರತದ. ಇವತ್ತ ನಗಲಿಕತ್ತವರು ನಾಳೆ ಅಳತಾರ ಮತ್ತ ಅಳಕೋತ ಕೂತವರಿಗೆ ನಾಳೆ ನಗಹಂಗ ದೇವರು ಮಾಡತಾನ.  ನಮ್ಮ ಕೈಯ್ಯಾಗ ಏನೂ ಇಲ್ಲ! ಎಲ್ಲ ಭಗವಂತನಾಟ ಸಂಗಣ್ಣ ಅಂತ ತುಂಬು ಗರ್ಭಿಣಿ ಶಾಂತಾ ಕಟ್ಟಿಮೇಲೆ ಕೂತಕೊಂಡು ಮನಿ ಆಳಮಗ ಸಂಗಣ್ಣನ ಜೊತಿ ಮಾತಾಡ್ಕೋತ ಕೂತಾಳ. ಶಾಂತಾ ಹೆಸರಿಗೆ ತಕ್ಕಹಂಗ ಶಾಂತಾ ಸ್ವಭಾವದ ಹೆಣ್ಣು. ಸಣ್ಣಕಿ ಇದ್ದಾಗ ತಾಯಿ ಕಳಕೊಂಡು ಅಪ್ಪನ ಮಗಳಾಗಿ ಬೆಳದಕಿಗೆ ತವರಮನಿ ಅಂದ್ರ ಖರೇನ ಏನಂತ ಗೊತ್ತಿಲ್ಲ. ಎರಡನೇ ಲಗ್ನ ಆದ್ರ ಮಗಳ ಮ್ಯಾಲೆ ಎಲ್ಲಿ ಪ್ರೀತಿ ಕಡಿಮಿ ಆಗ್ತದ ಅಂತ ವೆಂಕಣ್ಣ ಮಾಸ್ತರೂ ಹೆದರಿ ಎರಡನೇ ಲಗ್ನದ ಉಸಾಬರಿಗೆ ಹೋಗ್ಲಿಲ್ಲ. ಮಗಳಿಗೆ ಅಪ್ಪ, ಅಪ್ಪಗ ಮಗಳು ಅಂತ ಜೀವನ ಹಾಕಿಕೊಂಡು ಬಂದಿದ್ರು ಇಬ್ಬರು. ಮಾಸ್ತರಕಿ ನೌಕರಿಯೊಳಗ ಸಿಗ ೧೦೦ ರೂಪಾಯಿ ಪಾಗಾರದಾಗ ಮನಿ ಕಟ್ಕೊಂಡು ಎಲ್ಲೂ ಸಾಲ ಮಾಡದಹಂಗ ಜೀವನ ಮಾಡ್ಕೊಂಡು ಬಂದವರು ನಮ್ಮ ವೆಂಕಣ್ಣ ಮಾಸ್ತರು. ಕಟ್ಟಿದ ಮನಿಯಾದ್ರು ನಿಮ್ಮ ವಾರ್ಸಾದರ ಮಗಗ ಕೊಟ್ಟು ಹೋಗ್ಲಿಕ್ಕಾದ್ರೂ ಎರಡನೇ ಲಗ್ನ ಮಾಡ್ಕೋರಿ ಸರ.... ಅಂದವರ ಮಾತು ಕಿವಿಗೆ ಹಕ್ಕೋಲಾರ್ದ ತಾನೇನು, ತನ್ನ ಮನಿ ಏನು ಅಂತ ಇರ್ತಿದ್ರೂ ವಿಧಿ ಬಿಡಬೇಕಲ್ಲ, ಹೆಂಡತಿ ಸತ್ತು ಮೊದಲ ಜೀವನದಾಗ ಖಿನ್ನ ಆಗಿದ್ದ ವೆಂಕಣ್ಣ ಮಾಸ್ತರಿಗೆ ವಯಸ್ಸಾಗ್ತಿದ್ದ ಮಗಳು ಇನ್ನ ದೊಡ್ಡಾಕಿ ಆಗವಳ್ಳು ಅಂತ ಇನ್ನೊಂದ್ ಕಡೆ ಖೇದ.               ಊರಾಗ ಜನ ಕೇಳ ಪ್ರಶ್ನೆಗೆ ಉತ್ತರ ಕೊಡಲಿಕ್ಕೆ ಆಗದಹ0ಗ ಆಗಿ

ಮಾತೇ ಮಾಣಿಕ್ಯ !

Image
               ಜಗತ್ತಿನಲ್ಲಿ ಅತ್ಯಂತ ಸೂಕ್ಷ್ಮವಾದ ವಸ್ತು ಯಾವುದು ಅಂದರೆ ಅದು " ಮಾತು "!  ಎಷ್ಟು ಗಾದೆಗಳು ಬೇಕು ಮಾತಿನಬಗ್ಗೆ? "ಮಾತು ಮನೆ ಕೆಡಿಸ್ತು ತೂತು ಓಲೆ ಕೆಡಿಸ್ತು" ,  "ಆಡಿದ ಮಾತು ಕಳೆದ ಸಮಯ ಒಡೆದುಹೋದ ಮುತ್ತಿನಂತೆ" ಮತ್ತಿನ್ನಿತರೆ ಗಾದೆಗಳು ಮಾತಿನ ಸೂಕ್ಷ್ಮತೆಯನ್ನು ಬಣ್ಣಿಸುತ್ತವೆ. ಒಂದು ಮಾತು ಏನೆಲ್ಲ ರಾಧಾಂತಗಳನ್ನು ಸೃಷ್ಟಿಸಬಲ್ಲದು ಅಂತ ಹುಡುಕಿದರೆ ನಮಗೆಲ್ಲ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಬಸವಣ್ಣನವರು ನಾವಾಡುವ ಮಾತು ಹೇಗಿರಬೇಕು ಎನ್ನುವದರ ಬಗ್ಗೆ ಹೀಗೆ ಹೇಳುತ್ತಾರೆ "ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!  ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ಅಂತ. ನಮಗೆ ವಿದ್ಯೆ ಯೊಂದಿದ್ದರೆ ಅಷ್ಟೇ ಸಾಕಾಗದು, ನಾವು ನಮ್ಮ ವಿದ್ಯಯನ್ನು ಹೇಗೆ ಇನ್ನೊಬ್ಬರಿಗೆ ತಿಳಿ ಹೇಳುತ್ತೇವೆ ಅನ್ನುವದೂ ಪ್ರಮುಖಯವಲ್ಲವೇ! ಹೀಗೊಂದು ಉದಾಹರಣೆ ಹೇಳುತ್ತೇನೆ ಚಿಕ್ಕವರಿದ್ದಾಗ ನಾವಿದನ್ನು ಕೇಳಿ ಬೆಳಿದಿದ್ದೇವೆ ನಿಜ, ಇನ್ನೊಮ್ಮೆ ಮೆಲಕು ಹಾಕೋಣ!          ಒಬ್ಬ ರಾಜ ತನ್ನ ಆಸ್ಥಾನದಲ್ಲಿದ್ದ ಎಲ್ಲಾ ಜ್ಯೋತಿಷಿಗಳನ್ನು ಒಮ್ಮೆ ಬರಹೇಳಿದ. ಅದರಲ್ಲಿಯೇ ಅತೀ ಶ್ರೇಷ್ಠರಾದ ಇಬ್ಬರು ಜ್ಯೋತಿಷಿಗಳನ್ನು ಆಯಿದುಕೊಂಡು ಅವರಿಗೆ ತನ್ನ ಕುಟುಂಬದ ಬ

ಕನಸು ತಿರುಕನ ಕನಸಾಗದಿರಲಿ ...

Image
ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತೆನೆ...  ಕಂಡನೆಂತೆನೆ...   ಷಡಕ್ಷರಿಅವರ ಈ ಹಾಡು ಯಾರಿಗೆ ನೆನಪಿಲ್ಲ ಹೇಳಿ.. ನೀವು ಈ ಹಾಡನ್ನು ಕೇಳಿರದಿದ್ದರೆ ಈ ಹಾಡಿನ ಅರ್ಥ ಹೀಗಿದೆ ಕೇಳಿ: ಒಂದು ನಗರದಲ್ಲಿ ಒಬ್ಬ ತಿರುಕನಿದ್ದ, ದಿನವೂ ಬೇಡಿತಂದ ಹಿಟ್ಟಿನಲ್ಲಿ ಅಲ್ಪಸ್ವಲ್ಪವನ್ನು ಉಳಿಸಿ ಒಂದು ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿ ಅದನ್ನು ಆತನಿದ್ದ ಮುರುಕಲು ಮನೆಯ ಗೋಡೆಯ ಗೂಟಕ್ಕೆ ನೇತು ಬಿಟ್ಟಿದ್ದ. ಹರಕುಮುರುಕು ಮಂಚದಲ್ಲಿ ಅಂಗಾತ ಮಲಗಿ ನಿತ್ಯವೂ ಅದನ್ನೇ ದಿಟ್ಟಿಸುತ್ತಾ ಒರಗಿರುತ್ತಿದ್ದ. ಒಮ್ಮೆ ಹೀಗೇ ಒರಗಿರುತ್ತಾ ಕನಸುಕಂಡು ಈಗೇನಾದರೂ ನಗರದಲ್ಲಿ  ಕ್ಷಾಮಬಂದರೆ ತನ್ನಲ್ಲಿರುವ ಸಂಗ್ರಹಿಸಿಟ್ಟಿದ್ದ ಹಿಟ್ಟನ್ನು ಯೋಗ್ಯ ಬೆಲೆಗೆ ಮಾರಾಟಮಾಡಿ ಎರಡು ಆಡುಗಳನ್ನು ಕೊಂಡುಕೊಳ್ಳುತ್ತೇನೆ ಎಂದುಕೊಂಡ. ಕನಸು ಮುಂದುವರಿಯಿತು....  ಆಡುಗಳು ಮರಿಹಾಕಿದವು, ಅವುಗಳನ್ನೆಲ್ಲಾ ಮಾರಿ ಹಸುಗಳನ್ನು ಕೊಂಡ, ಹಸುಗಳ ಹೈನವನ್ನೆಲ್ಲಾ ಮಾರಿ ಎಮ್ಮೆಗಳನ್ನು ಕೊಂಡ, ಎಮ್ಮೆಗಳನ್ನೆಲ್ಲಾ ಮಾರಿ ಕುದುರೆಗಳನ್ನು ಕೊಂಡ. ಕುದುರೆಗಳ ಸಂತಾನಾಭಿವೃದ್ಧಿಯಿಂದ ಅವುಗಳ ಸಂಖ್ಯಾವೃದ್ಧಿಯಾಗಿ, ಅವುಗಳನ್ನೆಲ್ಲಾ ಮಾರಿ ಭಾರೀ ಶ್ರೀಮಂತನಾಗಿ ಬಂಗಲೆಯೊಂದನ್ನು ಕಟ್ಟಿಸಿದ. ಊರಿನ ದೊಡ್ಡ ಶ್ರೀಮಂತರು ಬಂದು ತಮ್ಮ ಮಗಳನ್ನು ಕೊಡುತ್ತೇವೆ ಮದುವೆಯಾಗು ಎಂದು ಒತ್ತಾಯಿಸಿದರು. ಸುಂದರಿಯನ್ನು ಮದುವೆಯಾದ ಆತನಿಗೆ ಗಂಡುಮಗುವೊಂದ

ಉಪ್ಪಿಗೊಂದು ಪತ್ರ

Image
ಪ್ರೀತಿಯ ಉಪೇಂದ್ರ ಸರ್,,            ನೆನ್ನೆ ನಿಮ್ಮ ಆಡಿಯೋ ಒಂದನ್ನು ಕೇಳಿ ತುಂಬಾ ಖುಷಿಯಾಯಿತು. " Alternate Politics " / "ಪ್ರಜಾಕೀಯ"ದ ನಿಮ್ಮ ಮಾತುಗಳು, ರಾಜಕೀಯ ಮಾತುಗಳು ಅಂತನಿಸಲಿಲ್ಲ (ರಾಜಕಾರಣಿಗಳು ಈ ಮಾತುಗಳನ್ನಾಡಲು ಸಾಧ್ಯವೇ ಇಲ್ಲ ಬಿಡಿ ಆ ಪ್ರಶ್ನೆ ಬೇರೆ). ಸ್ವಚ್ಛ ಮನಸ್ಸಿನಿಂದ ಸಮಾಜಕ್ಕೆ ಒಂದೊಳ್ಳೆ ಕೆಲಸ ಮಾಡೋಣ ನೀವುಗಳೂ ಕೈಜೋಡಿಸಿ ಅಂತ ನೀವು ನೀಡಿದ ಕರೆಗೆ ನನ್ನ ಬೆಂಬಲವಿದೆ.              ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ನಮಗೆ ನೀಡಿದ ದೊಡ್ಡ ಉಡುಗುರೆ " Divide and Rule " (ವೊಡೆದು ಆಳುವ ನೀತಿ). ಇದನ್ನೇ ನಮ್ಮ ರಾಜಕಾರಣಿಗಳು ಮಾಡಿದ್ದೂ, ಮತ್ತು ಮಾಡುತ್ತಿರುವದು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನನ್ನೆಲ್ಲ ಮಾಡಿದ್ದಾರೆ ಅಂತ ಪ್ರತಿಯೊಬ್ಬರಿಗೂ ಗೊತ್ತಿದೆ! ಯುವ ಪೀಳಿಗೆ ಇದರಿಂದ ಬೇಸತ್ತಿದೆ. ಭ್ರಷ್ಟರಲ್ಲೇ ಕಡಿಮೆ ಭ್ರಷ್ಟರನ್ನು ಆರಿಸಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ.   ರಾಜಕೀಯ ಜೀವನದುದ್ದಕ್ಕೋ ಕೆಟ್ಟ/ ಸ್ವಾರ್ಥ ಕೆಲಸವನ್ನೇ ಮಾಡಿಕೊಂಡಿದ್ದು (ಬೆರಳೆಣಿಕೆಯಷ್ಟು ರಾಜಕಾರಣಿಗಳು ಇದಕ್ಕೆ ಹೊರತು), ತಾವು ಬೆಳೆದು ದೊಡ್ಡವರಾಗುತ್ತಾರೆಯೇ ವಿನಃ ಜನರು ಅಲ್ಲೇ ಇರುತ್ತಾರೆ.                 ಮತದಾನ ಅನ್ನುವ ಪದದಲ್ಲಿ ಎಂತಹ ಅರ್ಥವಿದೆ ಅಲ್ಲವಾ ಸರ್! ಮತವನ್ನ ದಾನವಾಗಿ ಕೊಡುವುದು. ದಾನವನ್ನು ಪಡೆದವರಿಗೆ ಈ ಬಗ್ಗೆ ಅರಿವಿರಬೇಕು ಕೊಟ್ಟ ದ

"ಪಂಚ" ಕಜ್ಜಾಯ

Image
ಶಹಭಾಷ್! ಮೆಚ್ಚಲೇಬೇಕು.. ಊಟ ಮಾಡಿದರಾಯಿತು ಬಿಟ್ಟರಾಯಿತು .. ನಿದ್ದೆ ಮಾಡಿದರಾಯಿತು ಬಿಟ್ಟರಾಯಿತು.. ಗೆಲ್ಲಲೇ ಬೇಕು ಅಂತ ಪಣತೊಟ್ಟು ಗೆದ್ದು ತೋರಿಸಿದ ಅಮಿತ್ ಶಾ ಮತ್ತು ಮೋದಿ ಜೋಡಿ ಸಾಧನೆ ಅಷ್ಟಿಷ್ಟಲ್ಲ.. ಪಂಜಾಬ್ ಮತ್ತು ಗೋವಾ ದಲ್ಲಿ ಅಧಿಕಾರ ಕಳೆದುಕೊಂಡಿದ್ದು ಬೇಸರವೆನ್ನಿಸದ ರೀತಿಯಲ್ಲಿ ಉತ್ತರ ಪ್ರದೇಶದ ಜನ ಬಿಜೆಪಿಯನ್ನು ಗೆಲ್ಲಿಸುವದರ ಮೂಲಕ ದೊಡ್ಡ ಉಡುಗರೆಯನ್ನೇ ಕೊಟ್ಟಿದ್ದಾರೆ. ನಿಜ ಹೇಳಬೇಕಾದರೆ ಬಿಜೆಪಿ ಕೂಡ ಇಷ್ಟೊಂದು ದೊಡ್ಡಮಟ್ಟದ ಗೆಲುವು ತಮ್ಮದಾಗುತ್ತದೆ ಅಂತ ಊಹಿಸಿರಲೂ ಸಾಧ್ಯವಿಲ್ಲ ಬಿಡಿ.                           ನನಗನ್ನಿಸುವ ಪ್ರಕಾರ ಬಿಜೆಪಿ ಇದನ್ನು ಪಾಸಿಟಿವ್ ಆಗಿ ತಗೆದುಕೊಳ್ಳದೆ ಇದ್ದಾರೆ ಒಳ್ಳೆಯದು. ಕೇಳಬಹುದು ಅದು ಹೇಗೆ ಅಷ್ಟು easy ಆಗಿ ಹೇಳುತ್ತಿದ್ದೀರಾ, ಇದೇನು ಸಾಧನೆ ಅಲ್ಲವೇ ಅಂತ. ಪಂಚ ರಾಜ್ಯಗಳ ಫಲಿತಾಂಶ ನೋಡಿದಾಗ ಹಾಗನ್ನಿಸುತ್ತದೆ. ಆ ರಾಜ್ಯಗಳ ಸರ್ಕಾರಗಳ ಆಡಳಿತ ಸರಿ ಅನ್ನಿಸದೆ ಬೇರೆಯವರಿಗೆ ಅಧಿಕಾರ ಕೊಟ್ಟು ನೋಡೋಣ ಅಂತ ಜನರು ಆರಿಸಿದ ದಾರಿ ಅಷ್ಟೇ. ಹಾಗೆ ಮೋದಿ ಅಲೆ ಇನ್ನು ಇದೆ ಅನ್ನುವದದಲ್ಲಿ ಮಣಿಪುರ ಗೋವಾ ಮತ್ತು ಪಂಜಾಬ್ ನಲ್ಲಿಕೂಡ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಬೇಕಿತ್ತು.                     ಮುಂದಿನ ವರ್ಷದಲ್ಲಿ ಬರುತ್ತಿರುವ ಕರ್ನಾಟಕದ ಚುನಾವಣೆ ಸುಲಭದ ಚುನಾವಣೆಆದದು. ತ್ರಿಕೋನ ಸ್ಪರ