"ಪಂಚ" ಕಜ್ಜಾಯ




ಶಹಭಾಷ್! ಮೆಚ್ಚಲೇಬೇಕು.. ಊಟ ಮಾಡಿದರಾಯಿತು ಬಿಟ್ಟರಾಯಿತು .. ನಿದ್ದೆ ಮಾಡಿದರಾಯಿತು ಬಿಟ್ಟರಾಯಿತು.. ಗೆಲ್ಲಲೇ ಬೇಕು ಅಂತ ಪಣತೊಟ್ಟು ಗೆದ್ದು ತೋರಿಸಿದ ಅಮಿತ್ ಶಾ ಮತ್ತು ಮೋದಿ ಜೋಡಿ ಸಾಧನೆ ಅಷ್ಟಿಷ್ಟಲ್ಲ.. ಪಂಜಾಬ್ ಮತ್ತು ಗೋವಾ ದಲ್ಲಿ ಅಧಿಕಾರ ಕಳೆದುಕೊಂಡಿದ್ದು ಬೇಸರವೆನ್ನಿಸದ ರೀತಿಯಲ್ಲಿ ಉತ್ತರ ಪ್ರದೇಶದ ಜನ ಬಿಜೆಪಿಯನ್ನು ಗೆಲ್ಲಿಸುವದರ ಮೂಲಕ ದೊಡ್ಡ ಉಡುಗರೆಯನ್ನೇ ಕೊಟ್ಟಿದ್ದಾರೆ. ನಿಜ ಹೇಳಬೇಕಾದರೆ ಬಿಜೆಪಿ ಕೂಡ ಇಷ್ಟೊಂದು ದೊಡ್ಡಮಟ್ಟದ ಗೆಲುವು ತಮ್ಮದಾಗುತ್ತದೆ ಅಂತ ಊಹಿಸಿರಲೂ ಸಾಧ್ಯವಿಲ್ಲ ಬಿಡಿ. 

                         ನನಗನ್ನಿಸುವ ಪ್ರಕಾರ ಬಿಜೆಪಿ ಇದನ್ನು ಪಾಸಿಟಿವ್ ಆಗಿ ತಗೆದುಕೊಳ್ಳದೆ ಇದ್ದಾರೆ ಒಳ್ಳೆಯದು. ಕೇಳಬಹುದು ಅದು ಹೇಗೆ ಅಷ್ಟು easy ಆಗಿ ಹೇಳುತ್ತಿದ್ದೀರಾ, ಇದೇನು ಸಾಧನೆ ಅಲ್ಲವೇ ಅಂತ. ಪಂಚ ರಾಜ್ಯಗಳ ಫಲಿತಾಂಶ ನೋಡಿದಾಗ ಹಾಗನ್ನಿಸುತ್ತದೆ. ಆ ರಾಜ್ಯಗಳ ಸರ್ಕಾರಗಳ ಆಡಳಿತ ಸರಿ ಅನ್ನಿಸದೆ ಬೇರೆಯವರಿಗೆ ಅಧಿಕಾರ ಕೊಟ್ಟು ನೋಡೋಣ ಅಂತ ಜನರು ಆರಿಸಿದ ದಾರಿ ಅಷ್ಟೇ. ಹಾಗೆ ಮೋದಿ ಅಲೆ ಇನ್ನು ಇದೆ ಅನ್ನುವದದಲ್ಲಿ ಮಣಿಪುರ ಗೋವಾ ಮತ್ತು ಪಂಜಾಬ್ ನಲ್ಲಿಕೂಡ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಬೇಕಿತ್ತು.

























                    ಮುಂದಿನ ವರ್ಷದಲ್ಲಿ ಬರುತ್ತಿರುವ ಕರ್ನಾಟಕದ ಚುನಾವಣೆ ಸುಲಭದ ಚುನಾವಣೆಆದದು. ತ್ರಿಕೋನ ಸ್ಪರ್ಧೆ ಮಾತ್ರ ನಿಜ. ಯಾರು ಹಿತವರು ನಿನಗೆ ಈ ಮೂವರೊಳಗೆ ಅಂತ ಜನರು ಇಕ್ಕಟ್ಟಿಗೆ ಸಿಲಿಕಿಕೊಳ್ಳುವದಂತು ನಿಜ. ಸರಳ ಪಡಿಸುವದಾಗಿ ಹೇಳಬೇಕಂದರೆ, ಕಾಂಗ್ರೆಸ್ ವಿರೋಧಿ ಅಲೆ ಆಗಲೇ ರಾಜ್ಯಾದ್ಯಂತ ಶುರು ಆಗಿದೆ. ಕ್ರಿಮಿನಲ್ ಗಳು ಬೀದಿಗಿಳಿದಿದ್ದಾರೆ, ಬೆಂಗಳೂರಿನ ಭೂಗತ ಲೋಕ ಮತ್ತೆ ಕಣ್ಣು ಬಿಟ್ಟಿದೆ, ಸರ್ಕಾರ ತಾನೇ ನೀರು ಹಾಕಿ ಇಂತಹವರನ್ನು ಪೋಷಿಸುತ್ತಿದೆ ಅಂತ ಎಲ್ಲರಿಗೂ ಮನವರಿಕೆ ಆಗಿದೆ. ಅಷ್ಟೇ ಅಲ್ಲದೆ ಮೊನ್ನೆ ಉಕ್ಕಿನ ಸೇತುವೆ ಮತ್ತು ಡೈರಿ ಪ್ರಕರಣಗಳು ಸರ್ಕಾರದ ಮಾನ ಕಳಿದಿದ್ದಂತೂ ನಿಜ. ಭ್ರಷ್ಟರಿಗೆ ಮಣೆ ಹಾಕಿ ನಿಷ್ಟಾವಂತ ಪೊಲೀಸ್ ಅಧಿಕಾರಿಗಳನ್ನು ನಡೆಸಿ ಕೊಳ್ಳುತ್ತಿರುವ ರೀತಿ ಎಲ್ಲರಕೆಂಗಣ್ಣಿಗೆ ಗುರಿ ಆಗಿದೆ.

                ಇನ್ನು ಬಿಜೆಪಿ ತಾನು ಗೆದ್ದೇಬಿಡುತ್ತೇನೆ ಅಂತ ಬೀಗುತ್ತಿರುವದನ್ನು ನೋಡಿ ನಗಬೇಕೋ ಅಳಬೇಕೊ ಗೊತ್ತಾಗುತ್ತಿಲ್ಲ. ಸರ್ಕಾರ ರಚನೆಯ ಪ್ರಶ್ನೆ ಬಿಡಿ ತನ್ನ ಒಳಜಗಳ ಬಗೆಹರಿಸಿಕೊಳ್ಳಲೂ ಆಗುತ್ತಿಲ್ಲ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ ಎಂಬಂತೆ ಅಧಿಕಾರ ಸಿಗುವ ಮೊದಲೇ ಒಳಜಗಳಾಗಲು ಮತ್ತು ಬಿಸ್ ವೈ ಅವರ ಮೇಲೆ ಅಧಿಕಾರ ದುರುಪಯೋಗ ಅಂತ ಆಗಲೇ ಕೆಲ ಶಾಸಕರು ಹೈ ಕಮಾಂಡ್ ಮೊರೆ ಹೋಗಿದ್ದಾರೆ. ಕೇವಲ ನಾಲ್ಕು ವರ್ಷ ಹಿಂದೆ ಹೋಗಿ ಬಂದರೆ ಗೊತ್ತಾಗುತ್ತದೆ ಅಲ್ಲವೇ ಇವರು ಮಾಡಿದ ಮಹಾ ಸಾಧನೆ, ರೇಣುಕಾಚಾರಿ ಪ್ರಕರಣ, ಬ್ಲೂಬಾಯ್ಸ್ ಅಶ್ಲೀಲ ವಿಡಿಯೋ ವೀಕ್ಷಣೆ, ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಅವರ ಹೆಂಡತಿ ಪದ್ಮಪ್ರಿಯ ಕೊಲೆ ಪ್ರಕರಣ, ಸಂಪಂಗಿ ಲಂಚ ಪ್ರಕರಣ, ರೆಸಾರ್ಟ್ ರಾಜಕಾರಣ ಇವರಿನಂದಲೇ ಹುಟ್ಟಿದ್ದು ಅನ್ನುವದನ್ನು ಇಲ್ಲಿ ನೆನೆಸಿಕೊಳ್ಳಬೇಕಾಗುತ್ತದೆ.ಮುಖ್ಯ ಮಂತ್ರಿಯೊಬ್ಬರು ಜೈಲಿಗೆ ಹೋಗಿ ಬಂದು ಕರ್ನಾಟಕದ ಮಾನ ಮರ್ಯಾದೆ ಬೀದಿಗೆ ಹಾಕಿದ್ದು ಮಾತ್ರ ಸುಳ್ಳಲ್ಲ ಹೀಗೆ ಲಿಸ್ಟ್ ಬೆಳೆಯುತ್ತ ಗೋಗುತ್ತದೆ.....

               ಇನ್ನು JDS ವಿಚಾರಕ್ಕೆ ಬಂದರೆ, ಸಾಧನೆ ಮಾಡಿಯೂ ಅದನ್ನು project ಮಾಡದೇ / ಮಾಡಲಾಗದೆ ಏನೂ ಇಲ್ಲ ಎಂಬಂತೆ ಸುಮ್ಮನಾಗಿದೆ. ಮುಖ್ಯಮಂತ್ರಿಯೊಬ್ಬರು ಜನರ ಹತ್ತಿರಕ್ಕೆ ಹೋಗಿ ಅವರ ಯೋಗ ಕ್ಷೇಮ ವಿಚಾರಿಸುವ "ಗ್ರಾಮ ವಾಸ್ತವ್ಯ" ಯೋಜನೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ನಿಜವಾಗಿಯೂ ಕರ್ನಾಟಕಕ್ಕೆ ಹೆಮ್ಮೆಯ ವಿಚಾರವೇ ಸರಿ. ಉತ್ತರ ಕರ್ನಾಟಕದಲ್ಲಿ ಆಗಲೇ ಜೆಡಿಎಸ್ ಅಲೆ ಶುರುವಾಗಿದ್ದು ಎಲ್ಲೊ ಜೆಡಿಎಸ್ ಗೆ ಕರ್ನಾಟಕದ  ಜನರು ಸ್ವರ್ಣ ಮಾಲೆಯನ್ನು ಹಾಕಲು ಸಿದ್ಧರಾಗಿರುವದು ಕಾಣಿಸುತ್ತಿದೆ.

ನಾವೇನೇ ಹೇಳಿದರು ಕಾಲವೇ ನಿರ್ಧರಿಸುತ್ತದೆ ಅಲ್ಲವೇ 😏 ಕಾಲಾಯ ತಸ್ಮೈನಮಃ

ಇಂತಿ ನಿಮ್ಮ
ಎಂ.ಡಿ. ಹರೀಶ್


Comments

Popular posts from this blog

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

ಮಾತೇ ಮಾಣಿಕ್ಯ !

ಸೀತೆ ಆ ಜಿಂಕೆಯನ್ನು ಬಯಸಿದ್ದೇಕೆ ?