Posts

Showing posts from August, 2017

ಉಪ್ಪಿಗೊಂದು ಪತ್ರ

Image
ಪ್ರೀತಿಯ ಉಪೇಂದ್ರ ಸರ್,,            ನೆನ್ನೆ ನಿಮ್ಮ ಆಡಿಯೋ ಒಂದನ್ನು ಕೇಳಿ ತುಂಬಾ ಖುಷಿಯಾಯಿತು. " Alternate Politics " / "ಪ್ರಜಾಕೀಯ"ದ ನಿಮ್ಮ ಮಾತುಗಳು, ರಾಜಕೀಯ ಮಾತುಗಳು ಅಂತನಿಸಲಿಲ್ಲ (ರಾಜಕಾರಣಿಗಳು ಈ ಮಾತುಗಳನ್ನಾಡಲು ಸಾಧ್ಯವೇ ಇಲ್ಲ ಬಿಡಿ ಆ ಪ್ರಶ್ನೆ ಬೇರೆ). ಸ್ವಚ್ಛ ಮನಸ್ಸಿನಿಂದ ಸಮಾಜಕ್ಕೆ ಒಂದೊಳ್ಳೆ ಕೆಲಸ ಮಾಡೋಣ ನೀವುಗಳೂ ಕೈಜೋಡಿಸಿ ಅಂತ ನೀವು ನೀಡಿದ ಕರೆಗೆ ನನ್ನ ಬೆಂಬಲವಿದೆ.              ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ನಮಗೆ ನೀಡಿದ ದೊಡ್ಡ ಉಡುಗುರೆ " Divide and Rule " (ವೊಡೆದು ಆಳುವ ನೀತಿ). ಇದನ್ನೇ ನಮ್ಮ ರಾಜಕಾರಣಿಗಳು ಮಾಡಿದ್ದೂ, ಮತ್ತು ಮಾಡುತ್ತಿರುವದು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನನ್ನೆಲ್ಲ ಮಾಡಿದ್ದಾರೆ ಅಂತ ಪ್ರತಿಯೊಬ್ಬರಿಗೂ ಗೊತ್ತಿದೆ! ಯುವ ಪೀಳಿಗೆ ಇದರಿಂದ ಬೇಸತ್ತಿದೆ. ಭ್ರಷ್ಟರಲ್ಲೇ ಕಡಿಮೆ ಭ್ರಷ್ಟರನ್ನು ಆರಿಸಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ.   ರಾಜಕೀಯ ಜೀವನದುದ್ದಕ್ಕೋ ಕೆಟ್ಟ/ ಸ್ವಾರ್ಥ ಕೆಲಸವನ್ನೇ ಮಾಡಿಕೊಂಡಿದ್ದು (ಬೆರಳೆಣಿಕೆಯಷ್ಟು ರಾಜಕಾರಣಿಗಳು ಇದಕ್ಕೆ ಹೊರತು), ತಾವು ಬೆಳೆದು ದೊಡ್ಡವರಾಗುತ್ತಾರೆಯೇ ವಿನಃ ಜನರು ಅಲ್ಲೇ ಇರುತ್ತಾರೆ.                 ಮತದಾನ ಅನ್ನುವ ಪದದಲ್ಲಿ ಎಂತಹ ಅರ್ಥವಿದೆ ಅಲ್ಲವಾ ಸರ್! ಮತವನ್ನ ದಾನವಾಗಿ ಕೊಡುವುದು. ದಾನವನ್ನು ಪಡೆದವರಿಗೆ ಈ ಬಗ್ಗೆ ಅರಿವಿರಬೇಕು ಕೊಟ್ಟ ದ