Posts

Showing posts from December, 2017

ಗರ್ಭ ಗುಡಿ [Episode - 1]

Image
              ಕಾಲ ಚಕ್ರ ತೀರಗತಿರತದ. ಇವತ್ತ ನಗಲಿಕತ್ತವರು ನಾಳೆ ಅಳತಾರ ಮತ್ತ ಅಳಕೋತ ಕೂತವರಿಗೆ ನಾಳೆ ನಗಹಂಗ ದೇವರು ಮಾಡತಾನ.  ನಮ್ಮ ಕೈಯ್ಯಾಗ ಏನೂ ಇಲ್ಲ! ಎಲ್ಲ ಭಗವಂತನಾಟ ಸಂಗಣ್ಣ ಅಂತ ತುಂಬು ಗರ್ಭಿಣಿ ಶಾಂತಾ ಕಟ್ಟಿಮೇಲೆ ಕೂತಕೊಂಡು ಮನಿ ಆಳಮಗ ಸಂಗಣ್ಣನ ಜೊತಿ ಮಾತಾಡ್ಕೋತ ಕೂತಾಳ. ಶಾಂತಾ ಹೆಸರಿಗೆ ತಕ್ಕಹಂಗ ಶಾಂತಾ ಸ್ವಭಾವದ ಹೆಣ್ಣು. ಸಣ್ಣಕಿ ಇದ್ದಾಗ ತಾಯಿ ಕಳಕೊಂಡು ಅಪ್ಪನ ಮಗಳಾಗಿ ಬೆಳದಕಿಗೆ ತವರಮನಿ ಅಂದ್ರ ಖರೇನ ಏನಂತ ಗೊತ್ತಿಲ್ಲ. ಎರಡನೇ ಲಗ್ನ ಆದ್ರ ಮಗಳ ಮ್ಯಾಲೆ ಎಲ್ಲಿ ಪ್ರೀತಿ ಕಡಿಮಿ ಆಗ್ತದ ಅಂತ ವೆಂಕಣ್ಣ ಮಾಸ್ತರೂ ಹೆದರಿ ಎರಡನೇ ಲಗ್ನದ ಉಸಾಬರಿಗೆ ಹೋಗ್ಲಿಲ್ಲ. ಮಗಳಿಗೆ ಅಪ್ಪ, ಅಪ್ಪಗ ಮಗಳು ಅಂತ ಜೀವನ ಹಾಕಿಕೊಂಡು ಬಂದಿದ್ರು ಇಬ್ಬರು. ಮಾಸ್ತರಕಿ ನೌಕರಿಯೊಳಗ ಸಿಗ ೧೦೦ ರೂಪಾಯಿ ಪಾಗಾರದಾಗ ಮನಿ ಕಟ್ಕೊಂಡು ಎಲ್ಲೂ ಸಾಲ ಮಾಡದಹಂಗ ಜೀವನ ಮಾಡ್ಕೊಂಡು ಬಂದವರು ನಮ್ಮ ವೆಂಕಣ್ಣ ಮಾಸ್ತರು. ಕಟ್ಟಿದ ಮನಿಯಾದ್ರು ನಿಮ್ಮ ವಾರ್ಸಾದರ ಮಗಗ ಕೊಟ್ಟು ಹೋಗ್ಲಿಕ್ಕಾದ್ರೂ ಎರಡನೇ ಲಗ್ನ ಮಾಡ್ಕೋರಿ ಸರ.... ಅಂದವರ ಮಾತು ಕಿವಿಗೆ ಹಕ್ಕೋಲಾರ್ದ ತಾನೇನು, ತನ್ನ ಮನಿ ಏನು ಅಂತ ಇರ್ತಿದ್ರೂ ವಿಧಿ ಬಿಡಬೇಕಲ್ಲ, ಹೆಂಡತಿ ಸತ್ತು ಮೊದಲ ಜೀವನದಾಗ ಖಿನ್ನ ಆಗಿದ್ದ ವೆಂಕಣ್ಣ ಮಾಸ್ತರಿಗೆ ವಯಸ್ಸಾಗ್ತಿದ್ದ ಮಗಳು ಇನ್ನ ದೊಡ್ಡಾಕಿ ಆಗವಳ್ಳು ಅಂತ ಇನ್ನೊಂದ್ ಕಡೆ ಖೇದ.               ಊರಾಗ ಜನ ಕೇಳ ಪ್ರಶ್ನೆಗೆ ಉತ್ತರ ಕೊಡಲಿಕ್ಕೆ ಆಗದಹ0ಗ ಆಗಿ

ಮಾತೇ ಮಾಣಿಕ್ಯ !

Image
               ಜಗತ್ತಿನಲ್ಲಿ ಅತ್ಯಂತ ಸೂಕ್ಷ್ಮವಾದ ವಸ್ತು ಯಾವುದು ಅಂದರೆ ಅದು " ಮಾತು "!  ಎಷ್ಟು ಗಾದೆಗಳು ಬೇಕು ಮಾತಿನಬಗ್ಗೆ? "ಮಾತು ಮನೆ ಕೆಡಿಸ್ತು ತೂತು ಓಲೆ ಕೆಡಿಸ್ತು" ,  "ಆಡಿದ ಮಾತು ಕಳೆದ ಸಮಯ ಒಡೆದುಹೋದ ಮುತ್ತಿನಂತೆ" ಮತ್ತಿನ್ನಿತರೆ ಗಾದೆಗಳು ಮಾತಿನ ಸೂಕ್ಷ್ಮತೆಯನ್ನು ಬಣ್ಣಿಸುತ್ತವೆ. ಒಂದು ಮಾತು ಏನೆಲ್ಲ ರಾಧಾಂತಗಳನ್ನು ಸೃಷ್ಟಿಸಬಲ್ಲದು ಅಂತ ಹುಡುಕಿದರೆ ನಮಗೆಲ್ಲ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಬಸವಣ್ಣನವರು ನಾವಾಡುವ ಮಾತು ಹೇಗಿರಬೇಕು ಎನ್ನುವದರ ಬಗ್ಗೆ ಹೀಗೆ ಹೇಳುತ್ತಾರೆ "ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು!  ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ಅಂತ. ನಮಗೆ ವಿದ್ಯೆ ಯೊಂದಿದ್ದರೆ ಅಷ್ಟೇ ಸಾಕಾಗದು, ನಾವು ನಮ್ಮ ವಿದ್ಯಯನ್ನು ಹೇಗೆ ಇನ್ನೊಬ್ಬರಿಗೆ ತಿಳಿ ಹೇಳುತ್ತೇವೆ ಅನ್ನುವದೂ ಪ್ರಮುಖಯವಲ್ಲವೇ! ಹೀಗೊಂದು ಉದಾಹರಣೆ ಹೇಳುತ್ತೇನೆ ಚಿಕ್ಕವರಿದ್ದಾಗ ನಾವಿದನ್ನು ಕೇಳಿ ಬೆಳಿದಿದ್ದೇವೆ ನಿಜ, ಇನ್ನೊಮ್ಮೆ ಮೆಲಕು ಹಾಕೋಣ!          ಒಬ್ಬ ರಾಜ ತನ್ನ ಆಸ್ಥಾನದಲ್ಲಿದ್ದ ಎಲ್ಲಾ ಜ್ಯೋತಿಷಿಗಳನ್ನು ಒಮ್ಮೆ ಬರಹೇಳಿದ. ಅದರಲ್ಲಿಯೇ ಅತೀ ಶ್ರೇಷ್ಠರಾದ ಇಬ್ಬರು ಜ್ಯೋತಿಷಿಗಳನ್ನು ಆಯಿದುಕೊಂಡು ಅವರಿಗೆ ತನ್ನ ಕುಟುಂಬದ ಬ