Posts

Showing posts from June, 2020

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

Image
(2 minute read)  ಭಾರತದಲ್ಲಿ ಹಬ್ಬಗಳಿಗೆ ಆಚರಣೆಗಳಿಗೆ ಏನೊ ಅಭಾವವಿಲ್ಲ ತಿಂಗಳಿಗೆ ಸುಮಾರು 2 ಅಥವಾ 3 ಹಬ್ಬಗಳು ಅಥವಾ ಆಚರಣೆಗಳು ಸಾಮಾನ್ಯ! ಇಷ್ಟೆ ಸಾಕಾಗದೆ ನಾವು ಪಾಶ್ಚಿಮಾತ್ಯ (western ) ಆಚರಣೆಗಳನ್ನೂ ಸಂಭ್ರಮದಿಂದ ಆಚರಿಸಿ ಉದಾರತೆ ಮೆರೆಯುತ್ತೆವೆ. ಆದರೆ ನಿಜಕ್ಕೂ ಪಾಶ್ಚಿಮಾತ್ಯ ಆಚರಣೆಗಳು ನಿಜಕ್ಕೂ ನಾವು ಆಚರಿಸಬೇಕಾ? ಭಾರತೀಯ ಅವಿಭಕ್ತ ಕುಟುಂಬಕ್ಕೆ ಅವುಗಳ ಅವಶ್ಯಕತೆ ಇದೆಯೆ ?     ಒಮ್ಮೆ ನಾನು ಜರ್ಮನಿಯಿಂದ ಭಾರತಕ್ಕೆ ವಾಪಾಸಾಗುತ್ತಿದ್ದೆ. ಏರ್ಪೋರ್ಟ್ ಗೆ ಬರಲೆಂದು ಕ್ಯಾಬ್ ಬುಕ್ ಮಾಡಿದ್ದೆ. ಕ್ಯಾಬ್ ಚಾಲಕ ಜರ್ಮನ್ ಆಗಿದ್ದ ಆದರೆ ಇಂಗ್ಲಿಷ್ ನಲ್ಲೂ ಮಾತನಾಡುತ್ತಿದ್ದ (ಬಹಳಷ್ಟು ಜರ್ಮನಿ ಜನರಿಗೆ ಜರ್ಮನ ಭಾಷೆ ಹೊರತು ಬೇರೆ ಭಾಷೆ ಬರುವದಿಲ್ಲ). ಹಾಗಾಗಿ ನಾನು ಅವನೊಂದಿಗೆ ಅದು ಇದು ಅಂತೆಲ್ಲಾ ಮಾತನಾಡುತ್ತಿದ್ದೆ. ಹೀಗೆ ನಮ್ಮ ಸಂಭಾಷಣೆ ಮುಂದುವರೆದು ಆ ವ್ಯಕ್ತಿ ತನ್ನ ಪರಿವಾರದ ಬಗ್ಗೆ ಹೇಳಲಾರಂಭಿಸಿದ. ಆತನಿಗೆ 3 ಜನ ಮಕ್ಕಳು. ಮೊದಲನೆ ಮಗಳು 19 ವರ್ಷದವಳು ಅಂದ ನಾನು ಆಶ್ಚರ್ಯವಾಗಿ ಅವನಿಗೆ ಕೇಳಿದೆ what! Seriously? how old are you ? ಅಂತ. ಯಾಕೆಂದರೆ ನೋಡಲು ಅವನಿಗೆ ಅಷ್ಟೇನು ವಯಸ್ಸಾದಂತೆ ಅನಿಸುತ್ತಿರಲಿಲ್ಲ. ಅವನು ನಗುತ್ತಾ ಹೇಳಿದ ನನಗೆ 35 ವರ್ಷ. ಅವಳು ನನ್ನ ಮಲಮಗಳು (step daughter)  ಅಂತ. ಮುಂದುವರೆದು ಅವನು ಹೇಳಿದ ನನ್ನ ಹೆಂಡತಿಯ ಮೊದಲನೆ ಸಂಬಂಧದ 2 ಮಕ್ಕಳು ನಮ್ಮ ಜೊತೆಯಲ್ಲಿಯೇ