ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

(2 minute read)
 ಭಾರತದಲ್ಲಿ ಹಬ್ಬಗಳಿಗೆ ಆಚರಣೆಗಳಿಗೆ ಏನೊ ಅಭಾವವಿಲ್ಲ ತಿಂಗಳಿಗೆ ಸುಮಾರು 2 ಅಥವಾ 3 ಹಬ್ಬಗಳು ಅಥವಾ ಆಚರಣೆಗಳು ಸಾಮಾನ್ಯ! ಇಷ್ಟೆ ಸಾಕಾಗದೆ ನಾವು ಪಾಶ್ಚಿಮಾತ್ಯ (western ) ಆಚರಣೆಗಳನ್ನೂ ಸಂಭ್ರಮದಿಂದ ಆಚರಿಸಿ ಉದಾರತೆ ಮೆರೆಯುತ್ತೆವೆ. ಆದರೆ ನಿಜಕ್ಕೂ ಪಾಶ್ಚಿಮಾತ್ಯ ಆಚರಣೆಗಳು ನಿಜಕ್ಕೂ ನಾವು ಆಚರಿಸಬೇಕಾ? ಭಾರತೀಯ ಅವಿಭಕ್ತ ಕುಟುಂಬಕ್ಕೆ ಅವುಗಳ ಅವಶ್ಯಕತೆ ಇದೆಯೆ ? 
   ಒಮ್ಮೆ ನಾನು ಜರ್ಮನಿಯಿಂದ ಭಾರತಕ್ಕೆ ವಾಪಾಸಾಗುತ್ತಿದ್ದೆ. ಏರ್ಪೋರ್ಟ್ ಗೆ ಬರಲೆಂದು ಕ್ಯಾಬ್ ಬುಕ್ ಮಾಡಿದ್ದೆ. ಕ್ಯಾಬ್ ಚಾಲಕ ಜರ್ಮನ್ ಆಗಿದ್ದ ಆದರೆ ಇಂಗ್ಲಿಷ್ ನಲ್ಲೂ ಮಾತನಾಡುತ್ತಿದ್ದ (ಬಹಳಷ್ಟು ಜರ್ಮನಿ ಜನರಿಗೆ ಜರ್ಮನ ಭಾಷೆ ಹೊರತು ಬೇರೆ ಭಾಷೆ ಬರುವದಿಲ್ಲ). ಹಾಗಾಗಿ ನಾನು ಅವನೊಂದಿಗೆ ಅದು ಇದು ಅಂತೆಲ್ಲಾ ಮಾತನಾಡುತ್ತಿದ್ದೆ. ಹೀಗೆ ನಮ್ಮ ಸಂಭಾಷಣೆ ಮುಂದುವರೆದು ಆ ವ್ಯಕ್ತಿ ತನ್ನ ಪರಿವಾರದ ಬಗ್ಗೆ ಹೇಳಲಾರಂಭಿಸಿದ. ಆತನಿಗೆ 3 ಜನ ಮಕ್ಕಳು. ಮೊದಲನೆ ಮಗಳು 19 ವರ್ಷದವಳು ಅಂದ ನಾನು ಆಶ್ಚರ್ಯವಾಗಿ ಅವನಿಗೆ ಕೇಳಿದೆ what! Seriously? how old are you ? ಅಂತ. ಯಾಕೆಂದರೆ ನೋಡಲು ಅವನಿಗೆ ಅಷ್ಟೇನು ವಯಸ್ಸಾದಂತೆ ಅನಿಸುತ್ತಿರಲಿಲ್ಲ. ಅವನು ನಗುತ್ತಾ ಹೇಳಿದ ನನಗೆ 35 ವರ್ಷ. ಅವಳು ನನ್ನ ಮಲಮಗಳು (step daughter)  ಅಂತ. ಮುಂದುವರೆದು ಅವನು ಹೇಳಿದ ನನ್ನ ಹೆಂಡತಿಯ ಮೊದಲನೆ ಸಂಬಂಧದ 2 ಮಕ್ಕಳು ನಮ್ಮ ಜೊತೆಯಲ್ಲಿಯೇ ಇರುತ್ತಾರೆ. ಅವರನ್ನು ನಾನು ನನ್ನ ಮಕ್ಕಳಂತೆ ನೊಡಿಕೊಳ್ಳುತ್ತೇನೆ. ಅವರ ತಂದೆ ಅಷ್ಟು ಸರಿ ಇಲ್ಲ ಮಕ್ಕಳನ್ನು ಅಷ್ಟೂoದು ಪ್ರೀತಿಂದ ಕಾಣಲ್ಲಾ. ಅವರು fathets day ಗೆ ಮಾತ್ರ ಅವರ original ತಂದೆಯನ್ನು ಭೇಟಿ ಆಗುತ್ತಾರೆ ಅಂತ. ನಾನು ಅವನಿಗೆ ಕೇಳಿದೆ ಅವರು ನಿನ್ನೊಂದಿಗೊ fathers day ಆಚರಿಸುತ್ತಾರಾ ಅಂತ? ಆಗ ಅವನು ಹೇಳಿದ ಇಲ್ಲ ಇಲ್ಲ ಅವರು ಒಮ್ಮೆ ನನಗೂ happy fathers day ಅಂತ ವಿಶ್ ಮಾಡಿದ್ದರು ಆಗ ನಾನು ಹೇಳಿದೆ ನನ್ನನ್ನು ತಂದೆ ಅಂತ ಯಾವಾಗಲೂ ಅಂದುಕೊಳ್ಳಬೇಡಿ. ನಾನು ಯಾವಾಗಲೂ ನಿಮ್ಮ ಮಲತಂದೆಯೆ! ನಾನು ನಾಳೆ ನಿಮ್ಮೊಂದಿಗೆ ನಿಮ್ಮ ತಾಯಿಯೊಂದಿಗೆ ಬೇರ್ಪಡಬಹುದು ಅದಕ್ಕೆ ನೀವು ನಿಮ್ಮ ತಂದೆಯನ್ನು ಮಾತ್ರ ತಂದೆ ಅಂತ ಕರಿಯಿರಿ ಅಂದೆ ಅಂತ. ಆಗ ನನಗೆ fathers ಡೆ ಮದರ್ಸ್ ಡೆ ಇನ್ನಿತರ ಡೆ ಗಳ ಅವಶ್ಯಕತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಎಷ್ಟಿದೆ ಅಂತ ಗೊತ್ತಾಯಿತು.

ಏನೆ ಅನ್ನಿ , ವರ್ಷಪೂರ್ತಿ ತಂದೆ ಮಕ್ಕಳು ಜೊತೆಗಿದ್ದು ವರ್ಷಕ್ಕೊಮ್ಮೆ ಹ್ಯಾಪಿ ಫಾದರ್'ಸ್ ಡೇ ಅನ್ನೋದು ಭಾರತೀಯರಿಗೆ ಸರಿ ಹೋಗಲ್ಲ 😅  

 ಪ್ರೀತಿಇಂದ.....
MD ಹರೀಶ...

Comments

  1. Replies
    1. I'he celebrated this day three weeks ago back in europe. Please post next time also in english please.
      Best greats
      Victor

      Delete
  2. This comment has been removed by the author.

    ReplyDelete

Post a Comment

Popular posts from this blog

ಗರ್ಭ ಗುಡಿ [Episode - 1]

ಕನಸು ತಿರುಕನ ಕನಸಾಗದಿರಲಿ ...