Posts

Showing posts from 2020

ನಾನೂ ಫೇಮಸ್ ಆಗ್ಬೇಕಲ್ಲ!!

Image
              ಭಗತ್ ಸಿಂಗ್.. ಬೋಸ್.. ಗಾಂಧಿಜಿ... ಅಂಬೇಡ್ಕರ್ ಇವರೆಲ್ಲ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ! ಎಲ್ಲರಿಗೂ ಗೊತ್ತು.. ಹಾ wait.. ಇವರೆಲ್ಲ ನಿಮಗೆ ಹೇಗೆ ಗೊತ್ತು?  ತುಂಬಾ ಹಾಸ್ಯಾಸ್ಪದ ಪ್ರಶ್ನೆ ಅಲ್ವಾ? ಯಾಕಂದ್ರೆ ಇವರಿಂದಲೇ ನಾವಿಂದು ಸ್ವತಂತ್ರ ವಾಗಿದ್ದಿದ್ದು..  ಇಲ್ಲದಿದ್ದರೆ ನೀವಿಂದು ಏನಾಗಿರುತ್ತಿದ್ದೆವೋ ? ಆ ದೇವರೇ ಬಲ್ಲ ...  ಅದೇನೇ ಇರಲಿ ನಾನಿಂದು ಹೇಳಬೇಕಂದು ಹೊರಟಿರುವ ವಿಷಯ ಇತ್ತೀಚಿನ ಸೋಶಿಯಲ್ ಮೀಡಿಯಾ (ಫೇಸ್ಬುಕ್/ಟ್ವಿಟ್ಟರ್ ಇತ್ಯಾದಿ ) ದಲ್ಲಿನ ಬಳಿಕೆದಾರರ ಬಗ್ಗೆ. ಸೋಶಿಯಲ್ ಮೀಡಿಯಾ ಗಳಲ್ಲಿ ಹಲವಾರು ಬಗೆಯ ಜನರಿದ್ದಾರೆ. ಅದರಲ್ಲಿ ಈ ಫೇಮಸ್ ಆಗಬೇಕು ಅಂತ ತೋಚಿದ್ದನ್ನು ಬರೆಯುವ ಜನರಿದ್ದಾರಲ್ಲ ಅವರ ಬಗ್ಗೆ ಅಂತೂ ಹೇಳತೀರದ್ದು.            ಮೊನ್ನೆ YouTube ನಲ್ಲಿ ಫಣಿ ರಾಮಚಂದ್ರ (ಹಿರಿಯ ಬೆಳ್ಳಿ ತೆರೆ ಮತ್ತು ಕಿರುತೆರೆ ನಿರ್ದೇಶಕರು)ಅವರ ಸಂದರ್ಶನವನ್ನು ನೋಡುತ್ತಿದ್ದೆ. ಅವರು ಜೀವನದಲ್ಲಿ ಗೆದ್ದಿದ್ದಾರೆ ಸೋತಿದ್ದಾರೆ ನೊಂದಿದ್ದಾರೆ ಎಲ್ಲ ಬಗೆಯ ಅನುಭವವನ್ನು ಪ್ರೇಕ್ಷಕರ ಮುಂದೆ ಇಡುತ್ತಾ ಇನ್ನೊಬ್ಬರು ತಾವು ಮಾಡಿದ ತಪ್ಪನ್ನು ಮಾಡಬಾರದು ಅಂತ ಎಳೆ  ಎಳೆಯಾಗಿ ತಮ್ಮ ಅನುಭವ ಹಂಚಿಕೊಂಡ ವಿಡಿಯೋಗಳ ನ್ನೂ  ಬಿಡದೆ, ಅಲ್ಲೂ ಶಬ್ದ ಮಾಲಿನ್ಯ ಮಾಡಿ ಅವರಿಗೆ ಬಾಯಿಗೆ ಬಂದಂತೆ ತೋಚಿದ್ದನ್ನು ಕಾಮೆಂಟ್ ಗಳಲ್ಲಿ ಗೀಚಿದ್ದು ಕಂಡು ತುಂಬಾ ಕೆಟ್ಟದಾಗನ್ನಿಸಿತು. ನಾನೇಕೆ ಈ ವಿಷಯವನ್ನು ಇಲ

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

Image
(2 minute read)  ಭಾರತದಲ್ಲಿ ಹಬ್ಬಗಳಿಗೆ ಆಚರಣೆಗಳಿಗೆ ಏನೊ ಅಭಾವವಿಲ್ಲ ತಿಂಗಳಿಗೆ ಸುಮಾರು 2 ಅಥವಾ 3 ಹಬ್ಬಗಳು ಅಥವಾ ಆಚರಣೆಗಳು ಸಾಮಾನ್ಯ! ಇಷ್ಟೆ ಸಾಕಾಗದೆ ನಾವು ಪಾಶ್ಚಿಮಾತ್ಯ (western ) ಆಚರಣೆಗಳನ್ನೂ ಸಂಭ್ರಮದಿಂದ ಆಚರಿಸಿ ಉದಾರತೆ ಮೆರೆಯುತ್ತೆವೆ. ಆದರೆ ನಿಜಕ್ಕೂ ಪಾಶ್ಚಿಮಾತ್ಯ ಆಚರಣೆಗಳು ನಿಜಕ್ಕೂ ನಾವು ಆಚರಿಸಬೇಕಾ? ಭಾರತೀಯ ಅವಿಭಕ್ತ ಕುಟುಂಬಕ್ಕೆ ಅವುಗಳ ಅವಶ್ಯಕತೆ ಇದೆಯೆ ?     ಒಮ್ಮೆ ನಾನು ಜರ್ಮನಿಯಿಂದ ಭಾರತಕ್ಕೆ ವಾಪಾಸಾಗುತ್ತಿದ್ದೆ. ಏರ್ಪೋರ್ಟ್ ಗೆ ಬರಲೆಂದು ಕ್ಯಾಬ್ ಬುಕ್ ಮಾಡಿದ್ದೆ. ಕ್ಯಾಬ್ ಚಾಲಕ ಜರ್ಮನ್ ಆಗಿದ್ದ ಆದರೆ ಇಂಗ್ಲಿಷ್ ನಲ್ಲೂ ಮಾತನಾಡುತ್ತಿದ್ದ (ಬಹಳಷ್ಟು ಜರ್ಮನಿ ಜನರಿಗೆ ಜರ್ಮನ ಭಾಷೆ ಹೊರತು ಬೇರೆ ಭಾಷೆ ಬರುವದಿಲ್ಲ). ಹಾಗಾಗಿ ನಾನು ಅವನೊಂದಿಗೆ ಅದು ಇದು ಅಂತೆಲ್ಲಾ ಮಾತನಾಡುತ್ತಿದ್ದೆ. ಹೀಗೆ ನಮ್ಮ ಸಂಭಾಷಣೆ ಮುಂದುವರೆದು ಆ ವ್ಯಕ್ತಿ ತನ್ನ ಪರಿವಾರದ ಬಗ್ಗೆ ಹೇಳಲಾರಂಭಿಸಿದ. ಆತನಿಗೆ 3 ಜನ ಮಕ್ಕಳು. ಮೊದಲನೆ ಮಗಳು 19 ವರ್ಷದವಳು ಅಂದ ನಾನು ಆಶ್ಚರ್ಯವಾಗಿ ಅವನಿಗೆ ಕೇಳಿದೆ what! Seriously? how old are you ? ಅಂತ. ಯಾಕೆಂದರೆ ನೋಡಲು ಅವನಿಗೆ ಅಷ್ಟೇನು ವಯಸ್ಸಾದಂತೆ ಅನಿಸುತ್ತಿರಲಿಲ್ಲ. ಅವನು ನಗುತ್ತಾ ಹೇಳಿದ ನನಗೆ 35 ವರ್ಷ. ಅವಳು ನನ್ನ ಮಲಮಗಳು (step daughter)  ಅಂತ. ಮುಂದುವರೆದು ಅವನು ಹೇಳಿದ ನನ್ನ ಹೆಂಡತಿಯ ಮೊದಲನೆ ಸಂಬಂಧದ 2 ಮಕ್ಕಳು ನಮ್ಮ ಜೊತೆಯಲ್ಲಿಯೇ

CAA CAB ... ಏನ್ ಇದೆಲ್ಲ?

Image
    ಈ ಆರ್ಟಿಕಲ್ ನ ಉದ್ದೇಶ CAA ಬಗೆಗಿನ ಗೊಂದಲಗಳಿಗೆ ತೆರೆಯೆಳಿಯುವ ಒಂದು ಪ್ರಯತ್ನ... CAB ಮತ್ತು CAA ಒಂದೇ ಅಥವಾ ಬೇರೆ?  ಬಿಲ್ ಅಂದರೆ, ಶಾಸಕಾಂಗದಲ್ಲಿ ತರುವ ಬದಲಾವಣೆಗಳನ್ನು ಮೊದಲು ಬಿಲ್ ರೂಪದಲ್ಲಿ ಮಾರ್ಲಿಮೆಂಟ್ ನಲ್ಲಿ ರತಲಾಗುತ್ತದೆ. ಕೆಳಮನೆ(ಲೋಕಸಭೆ) ಮೆಲ್ಮನೆ (ರಾಜ್ಯಸಭೆ) ಗಳಲ್ಲಿ ಈ ಬಿಲ್ ಪಾಸ್ ಆದಮೇಲೆ ರಾಷ್ಟ್ರಪತಿ ಈ ಬಿಲ್ ಗೆ ಸಮ್ಮತಿರೂಪದಲ್ಲಿ ಸಹಿ ಹಾಕಬೇಕಾಗುತ್ತದೆ. ಸಹಿ ಹಾಕಿದ ಮೇಲೆ ಈ ಬಿಲ್ ಆಕ್ಟ್  (ಆದೇಶ) ಆಗಿ ಮಾರ್ಪಡುತ್ತದೆ. ಅದರಂತೆ CAB ಅಂದರೆ  Citizenship Amendment  Bill  ಮತ್ತು CAA ಅಂದರೆ Citizenship Amendment  Act . CAA ಯಿಂದ ಭಾರತೀಯ ಪ್ರಜೆಗಳಿಗೆ ಆಗುವ ತೊಂದರೆಗಳೇನು ?         CAA ಇಂದ ಭಾರತೀಯರಿಗೆ ಯಾವುದೇ ತೊಂದರೆಗಳಿಲ್ಲ. ಯಾವುದೇ ಭಾರತೀಯನೂ ಯಾವುದೇ ದಾಖಲಾತಿಯನ್ನು ಯಾರಿಗೂ ತೋರಿಸಬೇಕಿಲ್ಲ ಬದಲಾಗಿ CAA ಒಂದು ಆಕ್ಟ್ ಆಗಿದ್ದು ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಅಫಗಾನಿಸ್ತಾನದ ಹಿಂದುಳಿದ ವರ್ಗಗಳಿಗೆ (ಹಿಂದೂ, ಕ್ರಿಶ್ಚಿಯನ್, ಬುದ್ಧ, ಪಾರಸಿ, ಜೈನ ಮತ್ತು ಸಿಖ್ಖ) ಭಾರತೀಯ ಪೌರತ್ವ ಕೊಡುವರಾದ ಬಗ್ಗೆ ಆಗಿದೆ.            ಮೇಲ್ಕಂಡ ದೇಶದ ಪ್ರಜೆಗಳು ಈಗಲೂ ಹರಿದು ಬಂದು ಭಾರತದ ಜನಸಂಖ್ಯೆ ಉಲ್ಮಾನ ಗೊಳ್ಳುವದಿಲ್ಲವೇ ?  2014 ಡಿಸೆಂಬರ್ 31 ಅಂದು ಅಥವಾ ಅದರ ಒಳಗೆ ಭಾರತಕ್ಕೆ ಬಂದ ಪಾಕಿಸ್ತಾನ ಅಫಘಾನಿಸ್ತಾನ್ ಮತ್ತು ಬಾಂಗ್ಲಾದೇಶದಿಂದ ಬಂದ ೬ ಹಿಂದ