CAA CAB ... ಏನ್ ಇದೆಲ್ಲ?


    ಈ ಆರ್ಟಿಕಲ್ ನ ಉದ್ದೇಶ CAA ಬಗೆಗಿನ ಗೊಂದಲಗಳಿಗೆ ತೆರೆಯೆಳಿಯುವ ಒಂದು ಪ್ರಯತ್ನ...
  • CAB ಮತ್ತು CAA ಒಂದೇ ಅಥವಾ ಬೇರೆ? 
ಬಿಲ್ ಅಂದರೆ, ಶಾಸಕಾಂಗದಲ್ಲಿ ತರುವ ಬದಲಾವಣೆಗಳನ್ನು ಮೊದಲು ಬಿಲ್ ರೂಪದಲ್ಲಿ ಮಾರ್ಲಿಮೆಂಟ್ ನಲ್ಲಿ ರತಲಾಗುತ್ತದೆ. ಕೆಳಮನೆ(ಲೋಕಸಭೆ) ಮೆಲ್ಮನೆ (ರಾಜ್ಯಸಭೆ) ಗಳಲ್ಲಿ ಈ ಬಿಲ್ ಪಾಸ್ ಆದಮೇಲೆ ರಾಷ್ಟ್ರಪತಿ ಈ ಬಿಲ್ ಗೆ ಸಮ್ಮತಿರೂಪದಲ್ಲಿ ಸಹಿ ಹಾಕಬೇಕಾಗುತ್ತದೆ. ಸಹಿ ಹಾಕಿದ ಮೇಲೆ ಈ ಬಿಲ್ ಆಕ್ಟ್  (ಆದೇಶ) ಆಗಿ ಮಾರ್ಪಡುತ್ತದೆ. ಅದರಂತೆ CAB ಅಂದರೆ  Citizenship Amendment Bill ಮತ್ತು CAA ಅಂದರೆ Citizenship Amendment Act.
  • CAA ಯಿಂದ ಭಾರತೀಯ ಪ್ರಜೆಗಳಿಗೆ ಆಗುವ ತೊಂದರೆಗಳೇನು ?
        CAA ಇಂದ ಭಾರತೀಯರಿಗೆ ಯಾವುದೇ ತೊಂದರೆಗಳಿಲ್ಲ. ಯಾವುದೇ ಭಾರತೀಯನೂ ಯಾವುದೇ ದಾಖಲಾತಿಯನ್ನು ಯಾರಿಗೂ ತೋರಿಸಬೇಕಿಲ್ಲ ಬದಲಾಗಿ CAA ಒಂದು ಆಕ್ಟ್ ಆಗಿದ್ದು ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಅಫಗಾನಿಸ್ತಾನದ ಹಿಂದುಳಿದ ವರ್ಗಗಳಿಗೆ (ಹಿಂದೂ, ಕ್ರಿಶ್ಚಿಯನ್, ಬುದ್ಧ, ಪಾರಸಿ, ಜೈನ ಮತ್ತು ಸಿಖ್ಖ) ಭಾರತೀಯ ಪೌರತ್ವ ಕೊಡುವರಾದ ಬಗ್ಗೆ ಆಗಿದೆ.
           ಮೇಲ್ಕಂಡ ದೇಶದ ಪ್ರಜೆಗಳು ಈಗಲೂ ಹರಿದು ಬಂದು ಭಾರತದ ಜನಸಂಖ್ಯೆ ಉಲ್ಮಾನ ಗೊಳ್ಳುವದಿಲ್ಲವೇ ? 
2014 ಡಿಸೆಂಬರ್ 31 ಅಂದು ಅಥವಾ ಅದರ ಒಳಗೆ ಭಾರತಕ್ಕೆ ಬಂದ ಪಾಕಿಸ್ತಾನ ಅಫಘಾನಿಸ್ತಾನ್ ಮತ್ತು ಬಾಂಗ್ಲಾದೇಶದಿಂದ ಬಂದ ೬ ಹಿಂದುಳಿದ ಜನಾಂಗೀಯ ದವರಿಗೆ (ಈ ಮೂರು ದೇಶಗಳು ಮುಸ್ಲಿಂ ದೇಶಗಳಾಗಿದ್ದು ಹಿಂದೂ ಕ್ರಿಶ್ಚಿಯನ್ ಬುದ್ಧ ಪಾರಸಿ ಜೈನ ಮತ್ತು ಸಿಖ್ಖ ಸಮುದಾಯಗಳು ಹಿಂದುಳಿದ ಮತ್ತು ತುಳಿತಕ್ಕೊಳಗಾದ ಜನಾಂಗಗಳಾಗಿವೆ) ಮಾತ್ರ ಭಾರತದ ಪೌರತ್ವವನ್ನು ನೀಡಲಾಗುತ್ತದೆ ಮತ್ತು ಅವರನ್ನು ಅಕ್ರಮ ವಲಸಿಗರಲ್ಲವೆಂದು ಪರಿಗಣಿಸುತ್ತದೆ.
  • CAA ಬಿಲ್ ನಿಂದಾಗಿ ಭಾರತೀಯ ಮುಸ್ಲಿಂ ಪ್ರಜೆಗಳು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ತಮ್ಮ ಪೌರತ್ವವನ್ನು ಖಚಿತಪಡಿಸಿಕೊಳ್ಳಬೇಕೇ ? ?
ಇಲ್ಲ.. CAA ಭಾರತೀಯ ಪ್ರಜೆಗಳ ಬಗೆಗಿನ ವಿಚಾರವಲ್ಲ. ಇದು ಕೇವಲ ಅಕ್ರಮ ವಲಸಿಗರ ಪೌರತ್ವದ ಬಗೆಗಿನ ಕಾಯಿದೆ ತಿದ್ದುಪಡಿ ಮಾತ್ರ.
ಮತ್ತು ಮುಖ್ಯವಾಗಿ NRC (National Register of Citizen) ದೇಶವ್ಯಾಪಿ ಅಲ್ಲ... ಸಧ್ಯ ಅಸ್ಸಾಂ ಓಂದಕ್ಕೆ ಸೀಮಿತವಾಗಿದೆ. ಮತ್ತು NPR (National Polulation  Register) ಭಾರತೀಯರಿಗೆ ಮತ್ತು ಭಾರತದಲ್ಲಿರುವ ವಿದೆಶಿಯರಿಗೂ ಅನ್ವಯಿಸುತ್ತದೆ. NPR ಮಾಹಿತಿಯಿಂದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತರುವ ಯೋಜನೆಗಳಿಗೆ ಉಪಯೋಗಿಸಲಾಗುತ್ತದೆ. 

Comments

Popular posts from this blog

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

ನಾನೂ ಫೇಮಸ್ ಆಗ್ಬೇಕಲ್ಲ!!

ಕನಸು ತಿರುಕನ ಕನಸಾಗದಿರಲಿ ...