ನಾನೂ ಫೇಮಸ್ ಆಗ್ಬೇಕಲ್ಲ!!

              ಭಗತ್ ಸಿಂಗ್.. ಬೋಸ್.. ಗಾಂಧಿಜಿ... ಅಂಬೇಡ್ಕರ್ ಇವರೆಲ್ಲ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ! ಎಲ್ಲರಿಗೂ ಗೊತ್ತು.. ಹಾ wait.. ಇವರೆಲ್ಲ ನಿಮಗೆ ಹೇಗೆ ಗೊತ್ತು? ತುಂಬಾ ಹಾಸ್ಯಾಸ್ಪದ ಪ್ರಶ್ನೆ ಅಲ್ವಾ? ಯಾಕಂದ್ರೆ ಇವರಿಂದಲೇ ನಾವಿಂದು ಸ್ವತಂತ್ರ ವಾಗಿದ್ದಿದ್ದು.. ಇಲ್ಲದಿದ್ದರೆ ನೀವಿಂದು ಏನಾಗಿರುತ್ತಿದ್ದೆವೋ ? ಆ ದೇವರೇ ಬಲ್ಲ ... ಅದೇನೇ ಇರಲಿ ನಾನಿಂದು ಹೇಳಬೇಕಂದು ಹೊರಟಿರುವ ವಿಷಯ ಇತ್ತೀಚಿನ ಸೋಶಿಯಲ್ ಮೀಡಿಯಾ (ಫೇಸ್ಬುಕ್/ಟ್ವಿಟ್ಟರ್ ಇತ್ಯಾದಿ ) ದಲ್ಲಿನ ಬಳಿಕೆದಾರರ ಬಗ್ಗೆ. ಸೋಶಿಯಲ್ ಮೀಡಿಯಾ ಗಳಲ್ಲಿ ಹಲವಾರು ಬಗೆಯ ಜನರಿದ್ದಾರೆ. ಅದರಲ್ಲಿ ಈ ಫೇಮಸ್ ಆಗಬೇಕು ಅಂತ ತೋಚಿದ್ದನ್ನು ಬರೆಯುವ ಜನರಿದ್ದಾರಲ್ಲ ಅವರ ಬಗ್ಗೆ ಅಂತೂ ಹೇಳತೀರದ್ದು. 
        ಮೊನ್ನೆ YouTube ನಲ್ಲಿ ಫಣಿ ರಾಮಚಂದ್ರ (ಹಿರಿಯ ಬೆಳ್ಳಿ ತೆರೆ ಮತ್ತು ಕಿರುತೆರೆ ನಿರ್ದೇಶಕರು)ಅವರ ಸಂದರ್ಶನವನ್ನು ನೋಡುತ್ತಿದ್ದೆ. ಅವರು ಜೀವನದಲ್ಲಿ ಗೆದ್ದಿದ್ದಾರೆ ಸೋತಿದ್ದಾರೆ ನೊಂದಿದ್ದಾರೆ ಎಲ್ಲ ಬಗೆಯ ಅನುಭವವನ್ನು ಪ್ರೇಕ್ಷಕರ ಮುಂದೆ ಇಡುತ್ತಾ ಇನ್ನೊಬ್ಬರು ತಾವು ಮಾಡಿದ ತಪ್ಪನ್ನು ಮಾಡಬಾರದು ಅಂತ ಎಳೆ  ಎಳೆಯಾಗಿ ತಮ್ಮ ಅನುಭವ ಹಂಚಿಕೊಂಡ ವಿಡಿಯೋಗಳನ್ನೂ ಬಿಡದೆ, ಅಲ್ಲೂ ಶಬ್ದ ಮಾಲಿನ್ಯ ಮಾಡಿ ಅವರಿಗೆ ಬಾಯಿಗೆ ಬಂದಂತೆ ತೋಚಿದ್ದನ್ನು ಕಾಮೆಂಟ್ ಗಳಲ್ಲಿ ಗೀಚಿದ್ದು ಕಂಡು ತುಂಬಾ ಕೆಟ್ಟದಾಗನ್ನಿಸಿತು. ನಾನೇಕೆ ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದೆ ಅಂದರೆ ಈ ಕಾಮೆಂಟ್ ಮಾಡುವ ಜನ ಸಾಧನೆಯ ಅರ್ಥ ಗೊತ್ತಿಲ್ಲದೇ ಬೇಜವಾಬ್ದಾರಿಯಾಗಿ ವರ್ತಿಸುವ ನಡೆ ಯೆಲ್ಲಿಂದ ಕಲಿತರು ಅಂತ ಕೇಳಿದರೆ ಅದು ಮತ್ತಾರು ಅಲ್ಲ! ಅದೇ ನಾನೂ ಫೇಮಸ್ ಆಗಬೇಕಲ್ಲ ಅಂತ ಜಿದ್ದಿಗೆ ಬಿದ್ದು ವರ್ತಿಸುವ ಸಮುದಾಯ ನೊಡಿ.

So... ಅದೇ ಫೇಮಸ್ ಆಗೋದು ಹೇಗೆ?
ಸೋಶಿಯಲ್ ಮೀಡಿಯಾದಲ್ಲಿ ಪ್ರಾಯಶಃ 90% ಪ್ರತಿಶತ ಫೇಮಸ್ ಆಗಿರುವ ಜನ ಏನನ್ನೂ ಸಾಧಿಸಿದವರಲ್ಲ ಅವರಿವರ ಕಾಲೆಳೆದು ಪ್ರಸಿದ್ದರಾದವರು. ಈಗಂತೂ ಅದಾವುದೊ ಒಂದು ಪಕ್ಷ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನ ಹಿಂಬಾಲಕರನ್ನು ಹೊಂದಿದವರಿಗೆ ಮಾತ್ರ ಚುನಾವಣೆಯಲ್ಲಿ ಟಿಕೆಟ್ ಅಂತೆ 🙆‍♂️ ಯೆಲ್ಲಿಗೆ ಬಂತು ನೋಡಿ ನಮ್ಮ ಸಮಾಜ! 

ನಾನು ಅದೆಷ್ಟೊ ಜನ ಒಳ್ಳೆಯ ಸಾಹಿತಿಗಳನ್ನು ನೋಡಿದ್ದೇನೆ ಅದೆಷ್ಟೊ ಜನ ಸಮಾಜ ಸೇವಕರನ್ನೂ ನೋಡಿದ್ದೇನೆ ಆದರೆ ಅವರು ಮುಖ್ಯವಾಹಿನಿಗೆ ಬರಲಾಗುತ್ತಿಲ್ಲ ಇದಕ್ಕೆ ಕಾರಣ ಅವರ ಪ್ರತಿಭೆಯನ್ನು ಗುರುತಿಸುವ ಜನ ಕಡಿಮೆ ಆಗಿದೆ. ಅಂತಹವರನ್ನು ಬೆಂಬಲಿಸಿ ನಿಮಗೂ ಒಂದು ಒಲ್ಲೆಯೆ ಸಮಾಜ ಸಿಗಿವುದು ನೂರಕ್ಕೆ ನೂರು ಸತ್ಯ! 

Signing off 
MD ಹರೀಶ
 


Comments

Popular posts from this blog

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

ಕನಸು ತಿರುಕನ ಕನಸಾಗದಿರಲಿ ...