ಕನಸು ತಿರುಕನ ಕನಸಾಗದಿರಲಿ ...


ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತೆನೆ... ಕಂಡನೆಂತೆನೆ... 
ಷಡಕ್ಷರಿಅವರ ಈ ಹಾಡು ಯಾರಿಗೆ ನೆನಪಿಲ್ಲ ಹೇಳಿ.. ನೀವು ಈ ಹಾಡನ್ನು ಕೇಳಿರದಿದ್ದರೆ ಈ ಹಾಡಿನ ಅರ್ಥ ಹೀಗಿದೆ ಕೇಳಿ:

ಒಂದು ನಗರದಲ್ಲಿ ಒಬ್ಬ ತಿರುಕನಿದ್ದ, ದಿನವೂ ಬೇಡಿತಂದ ಹಿಟ್ಟಿನಲ್ಲಿ ಅಲ್ಪಸ್ವಲ್ಪವನ್ನು ಉಳಿಸಿ ಒಂದು ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿ ಅದನ್ನು ಆತನಿದ್ದ ಮುರುಕಲು ಮನೆಯ ಗೋಡೆಯ ಗೂಟಕ್ಕೆ ನೇತು ಬಿಟ್ಟಿದ್ದ. ಹರಕುಮುರುಕು ಮಂಚದಲ್ಲಿ ಅಂಗಾತ ಮಲಗಿ ನಿತ್ಯವೂ ಅದನ್ನೇ ದಿಟ್ಟಿಸುತ್ತಾ ಒರಗಿರುತ್ತಿದ್ದ. ಒಮ್ಮೆ ಹೀಗೇ ಒರಗಿರುತ್ತಾ ಕನಸುಕಂಡು ಈಗೇನಾದರೂ ನಗರದಲ್ಲಿ  ಕ್ಷಾಮಬಂದರೆ ತನ್ನಲ್ಲಿರುವ ಸಂಗ್ರಹಿಸಿಟ್ಟಿದ್ದ ಹಿಟ್ಟನ್ನು ಯೋಗ್ಯ ಬೆಲೆಗೆ ಮಾರಾಟಮಾಡಿ ಎರಡು ಆಡುಗಳನ್ನು ಕೊಂಡುಕೊಳ್ಳುತ್ತೇನೆ ಎಂದುಕೊಂಡ. ಕನಸು ಮುಂದುವರಿಯಿತು.... 


ಆಡುಗಳು ಮರಿಹಾಕಿದವು, ಅವುಗಳನ್ನೆಲ್ಲಾ ಮಾರಿ ಹಸುಗಳನ್ನು ಕೊಂಡ, ಹಸುಗಳ ಹೈನವನ್ನೆಲ್ಲಾ ಮಾರಿ ಎಮ್ಮೆಗಳನ್ನು ಕೊಂಡ, ಎಮ್ಮೆಗಳನ್ನೆಲ್ಲಾ ಮಾರಿ ಕುದುರೆಗಳನ್ನು ಕೊಂಡ. ಕುದುರೆಗಳ ಸಂತಾನಾಭಿವೃದ್ಧಿಯಿಂದ ಅವುಗಳ ಸಂಖ್ಯಾವೃದ್ಧಿಯಾಗಿ, ಅವುಗಳನ್ನೆಲ್ಲಾ ಮಾರಿ ಭಾರೀ ಶ್ರೀಮಂತನಾಗಿ ಬಂಗಲೆಯೊಂದನ್ನು ಕಟ್ಟಿಸಿದ. ಊರಿನ ದೊಡ್ಡ ಶ್ರೀಮಂತರು ಬಂದು ತಮ್ಮ ಮಗಳನ್ನು ಕೊಡುತ್ತೇವೆ ಮದುವೆಯಾಗು ಎಂದು ಒತ್ತಾಯಿಸಿದರು. ಸುಂದರಿಯನ್ನು ಮದುವೆಯಾದ ಆತನಿಗೆ ಗಂಡುಮಗುವೊಂದು ಜನಿಸಿ, ಮಗುವಿಗೆ ಪೂರ್ಣಚಂದ್ರನೆಂದು ನಾಮಕರಣವನ್ನೂ ಮಾಡಿದ. ಮಗುವು ಅಂಬೆಗಾಲಿಡುತ್ತಾ, ಆತ ಸವಾರಿ ಮಾಡುವ ಕುದುರೆ ಲಾಯದೆಡೆಗೆ ಹೋದಾಗ, ಹೆಂಡತಿಯನ್ನು ಕರೆದು, " ಲೇ ಪಾಪು ಕುದುರೆಬಳಿ ಹೋಗುತ್ತಿದ್ದಾನೆ, ಜೋಕೆ, ನೋಡಿಕೋ" ಎಂದು ಗತ್ತಿನಿಂದ ಹೇಳಿದ. ಆಕೆ ಸಲಿಗೆಯಿಂದ "ನಿಮಗೇನಾಗಿದೆ? ನಾನು ಒಂಬತ್ತು ತಿಂಗಳು ಹೊತ್ತು ಹೆತ್ತು ಜೋಪಾನ ಮಾಡಿದ್ದೀನಿ ನೀವೇನು ಮಾಡಿದ್ದೀರಿ? ನಿಮ್ಮ ಕೂಸನ್ನು ನೀವೇ ನೋಡಿಕೊಳ್ಳಿ" ಎಂದೇನಾದರೂ ಅಂದರೆ ತಕ್ಷಣ ಹೆಂಡತಿಗೆ ಹೀಗೆ ಒದೆಯುತ್ತೇನೆ ಎನ್ನುತ್ತಾ ಗೂಟಕ್ಕೆ ನೇತುಬಿಟ್ಟಿದ್ದ ಹಿಟ್ಟಿನ ಕುಡಿಕೆಗೆಯನ್ನ ವಾದ್ದೇಬಿಟ್ಟ. ಗಡಿಗೆ ವಡೆದುಹೋಗಿ ಕನಸೂ ಹಾರಿಹೋಯ್ತು! ತಿರುಕ ವಾಸ್ತವಕ್ಕೆ ಬಂದ.

ಈ ಕಥೆ ನಮಗೆ ತುಂಬಾ ಅನ್ವಹಿಸುತ್ತದೆ, ದೇಶದ ಅಭಿರುದ್ಧಿಯಬಗ್ಗೆ ಕನಸುಕಾಣುತ್ತಿರುವ ನಾವುಗಳು ವಾಸ್ತವಕ್ಕೆ ನಮ್ಮ ದೇಶ ಯಾವಹಂತದಲ್ಲಿದೆ ಅನ್ನುವದೆ ಅರಿವಿಲ್ಲದಂತಾಗಿದೆ ಅಲ್ಲವೇ?

ಕನಸು ಕಾಣುವದು ತಪ್ಪಿಲ್ಲ ಆದರೆ ವಾಸ್ತವದೊಂದಿಗಿದ್ದು ಕನಸುಕಾಣಿ!!

Comments

Popular posts from this blog

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

ಮಾತೇ ಮಾಣಿಕ್ಯ !

ಸೀತೆ ಆ ಜಿಂಕೆಯನ್ನು ಬಯಸಿದ್ದೇಕೆ ?