ಸೀತೆ ಆ ಜಿಂಕೆಯನ್ನು ಬಯಸಿದ್ದೇಕೆ ?

           
              ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ರಾಮಾಯಣದ ಬಗ್ಗೆ? ರಾಮಾಯಣ ಅಂದೊಡನೆ ನಮ್ಮ ಕಣ್ಣುಮುಂದೆ ಬರುವದು ಸೀತಾ ರಾಮರ ೧೪ ವರ್ಷ ವನವಾಸ, ರಾವಣ ಸೀತಾಪಹರಣ, ಆಂಜನೇಯನ ಲಂಕಾ ದಹನ, ಕೈಕೆಯ ಪುತ್ರ ವ್ಯಾಮೋಹ ಮತ್ತಿನ್ನಿತರ ಸನ್ನಿವೇಶಗಳು. ಹಾಗೆಯೇ ಈ ರಾಮಾಯಣವು ನೆಲಕ್ಕೊಂದರಂತೆ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಒಳಗೊಂಡು ವಾಲ್ಮೀಕಿ ರಾಮಾಯಣ, ತುಳಸಿ ರಾಮಾಯಣ, ಕಂಬ ರಾಮಾಯಣ ಹಾಗೂ ಇನ್ನಿತರ ಹೆಸರುಗಳಲ್ಲಿ ಕರೆಯಲ್ಪಡುತ್ತದೆ.

          ರಾಮಾಯಣ ಕಥೆಯಲ್ಲಿ ಬರುವ ಬಹುಮುಖ್ಯ ಸನ್ನಿವೇಶಗಳಲ್ಲಿ ಒಂದಾದ "ಸೀತಾಪಹರಣ" ಕಥೆಯಲ್ಲಿ ನನ್ನನ್ನು ಕಾಡುವ ಪ್ರಶ್ನೆ "ಸೀತೆ ಏಕೆ ಅಷ್ಟೊಂದು ಜಿಂಕೆಗಾಗಿ ಹಾತೊರೆದು ರಾಮ ಅದರ ಬೆನ್ನಟ್ಟಿ ಹೋಗುವಂತಾಯಿತು ಅಂತ?".... ಈ ವಿಷಯವನ್ನು ಚರ್ಚಿಸುವ ಮೊದಲು ಒಂದು ಚಿಕ್ಕ ಹಿನ್ನೆಲೆ: ರಾಮ ಮತ್ತು ಲಕ್ಷ್ಮಣರು ವಿಶ್ವಾಮಿತ್ರ ಮಹರ್ಷಿಗಳ ಆಶ್ರಮದಲ್ಲಿ ವಿದ್ಯಾರ್ಜನೆ ಗೆಂದು ನೆಲೆಸಿದ್ದಾಗ ಮಾರೀಚ ಮತ್ತು ಸುಬಾಹು ಎಂಬ ಇಬ್ಬರು ರಾಕ್ಷಸರು ವಿಶ್ವಾಮಿತ್ರರ ಯಾಗಕ್ಕೆ ಭಂಗ ತರುತ್ತಿದ್ದರು. ಆಗ ವಿಶ್ವಾಮಿತ್ರರ ಆಜ್ಞೆಯೆಂತೆ ರಾಮ ಲಕ್ಷ್ಮಣರು ಈ ಇಬ್ಬರು ರಾಕ್ಷಸರನ್ನು ಸಂಹರಿಸಲು ಸಜ್ಜಾದಾಗ, ಸುಬಾಹುವು ರಾಮನ ಬಾಣಕ್ಕೆ ಹತನಾಗುತ್ತಾನೆ. ಆದರೆ ಮಾರೀಚ ಅದೆಲ್ಲೋ ಗುಹೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ಆ ಮಾರೀಚನೆ ಮುಂದೆ ರಾವಣನಿಗೆ ಸಹಾಯವಾಗಿ ಬಂಗಾರದ ಜಿಂಕೆ ರೂಪದಲ್ಲಿ ಸೀತೆಯ ಮುಂದೆ ಅಡ್ಡಾಡಲು, ಸೀತೆಗೆ ಆ ಜಿಂಕೆಯ ಮೇಲೆ ಆಕರ್ಷಣೆ ಆಗಿ ಆ ಜಿಂಕೆ ತನಗೆ ಬೇಕೆಂಬ ಹಠಕ್ಕೆ ಬೀಳುತ್ತಾಳೆ. ಸರ್ವಸ್ವವನ್ನು ತ್ಯಜಿಸಿ ವನವಾಸಕ್ಕೆ ಬಂದ ಸೀತೆಗೇಕೆ ಆ ಜಿಂಕೆ ಇಷ್ಟೊಂದು ಇಷ್ಟವಾಯಿತು? ಅದು ಬೇಕೇ ಬೇಕು ಅಂತ ಹತಕ್ಕೆಬಿದ್ದು ರಾಮನಲ್ಲಿ ಮನವಿಇಟ್ಟಿದ್ದೇಕೆ? 


     ಉತ್ತರ ಹೀಗಿರಬಹುದು: ಸೀತೆ ವನವಾಸದಲ್ಲಿದ್ದಾಗ ಅವಳಿಗೆ loneliness / ಒಂಟಿತನ ಕಾಡುತ್ತಿರಬಹುದು ಅಥವಾ ಅದೆಲ್ಲೋ ತಾಯಿ ಮಗು ಆಟವಾಡುತ್ತಿದ್ದುದನ್ನು ನೋಡಿ ತನಗೂ ತಾಯಿತನವನ್ನು ಅನುಭವಿಸುವ ಒಂದು ಮಗುವನ್ನು ಎತ್ತಿ ಮುದ್ದಾಡುವ ಸಹಜ ಭಾವನೆ ಬಂದಿರಬಹುದು. ಮಾರೀಚ ಬಂಗಾರದ ಚಿಕ್ಕ ಜಿಂಕೆಯ ರೂಪದಲ್ಲಿ ಕಾಣಿಸಿದ್ದು ಸೀತೆಗೆ ಅದನ್ನು ಅಪ್ಪಿಕೊಂಡು ಮುದ್ದಾಡುವಂತಾಗಿರಬಹುದು. ಒಂದು ಮಾತಂತೂ ನಿಜ, ಹೆಣ್ಣು ತಾಯಿಯಾದಾಗಲೇ ತಾಯಿತನ ಬರಬೇಕಂತೇನಿಲ್ಲ. ಅವಳು ಹುಟ್ಟಿನಿಂದಲೇ ಅವಳು ತಾಯಿತನ ಎಲ್ಲ ಗುಣಗಳಾದ: ಪ್ರೀತಿ, ಪಾಲನೆ, ಪೋಷಣೆ ಎಂಬ ವಿಶೇಷ ಗುಣಗಳ ಖಜಾನೆ ಆಗಿರುತ್ತಾಳೆ.

                                                                                                                                    -MD ಹರೀಶ 

Comments

Popular posts from this blog

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

ಗರ್ಭ ಗುಡಿ [Episode - 1]

ಕನಸು ತಿರುಕನ ಕನಸಾಗದಿರಲಿ ...