ಉಪ್ಪಿಗೊಂದು ಪತ್ರ

ಪ್ರೀತಿಯ ಉಪೇಂದ್ರ ಸರ್,,

           ನೆನ್ನೆ ನಿಮ್ಮ ಆಡಿಯೋ ಒಂದನ್ನು ಕೇಳಿ ತುಂಬಾ ಖುಷಿಯಾಯಿತು. "Alternate Politics" / "ಪ್ರಜಾಕೀಯ"ದ ನಿಮ್ಮ ಮಾತುಗಳು, ರಾಜಕೀಯ ಮಾತುಗಳು ಅಂತನಿಸಲಿಲ್ಲ (ರಾಜಕಾರಣಿಗಳು ಈ ಮಾತುಗಳನ್ನಾಡಲು ಸಾಧ್ಯವೇ ಇಲ್ಲ ಬಿಡಿ ಆ ಪ್ರಶ್ನೆ ಬೇರೆ). ಸ್ವಚ್ಛ ಮನಸ್ಸಿನಿಂದ ಸಮಾಜಕ್ಕೆ ಒಂದೊಳ್ಳೆ ಕೆಲಸ ಮಾಡೋಣ ನೀವುಗಳೂ ಕೈಜೋಡಿಸಿ ಅಂತ ನೀವು ನೀಡಿದ ಕರೆಗೆ ನನ್ನ ಬೆಂಬಲವಿದೆ.

             ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ನಮಗೆ ನೀಡಿದ ದೊಡ್ಡ ಉಡುಗುರೆ "Divide and Rule" (ವೊಡೆದು ಆಳುವ ನೀತಿ). ಇದನ್ನೇ ನಮ್ಮ ರಾಜಕಾರಣಿಗಳು ಮಾಡಿದ್ದೂ, ಮತ್ತು ಮಾಡುತ್ತಿರುವದು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನನ್ನೆಲ್ಲ ಮಾಡಿದ್ದಾರೆ ಅಂತ ಪ್ರತಿಯೊಬ್ಬರಿಗೂ ಗೊತ್ತಿದೆ! ಯುವ ಪೀಳಿಗೆ ಇದರಿಂದ ಬೇಸತ್ತಿದೆ. ಭ್ರಷ್ಟರಲ್ಲೇ ಕಡಿಮೆ ಭ್ರಷ್ಟರನ್ನು ಆರಿಸಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ.  ರಾಜಕೀಯ ಜೀವನದುದ್ದಕ್ಕೋ ಕೆಟ್ಟ/ ಸ್ವಾರ್ಥ ಕೆಲಸವನ್ನೇ ಮಾಡಿಕೊಂಡಿದ್ದು (ಬೆರಳೆಣಿಕೆಯಷ್ಟು ರಾಜಕಾರಣಿಗಳು ಇದಕ್ಕೆ ಹೊರತು), ತಾವು ಬೆಳೆದು ದೊಡ್ಡವರಾಗುತ್ತಾರೆಯೇ ವಿನಃ ಜನರು ಅಲ್ಲೇ ಇರುತ್ತಾರೆ.

                ಮತದಾನ ಅನ್ನುವ ಪದದಲ್ಲಿ ಎಂತಹ ಅರ್ಥವಿದೆ ಅಲ್ಲವಾ ಸರ್! ಮತವನ್ನ ದಾನವಾಗಿ ಕೊಡುವುದು. ದಾನವನ್ನು ಪಡೆದವರಿಗೆ ಈ ಬಗ್ಗೆ ಅರಿವಿರಬೇಕು ಕೊಟ್ಟ ದಾನ ಮತ್ತೆ ಹಿಂಪಡೆಯಲಾಗದು ಅಂತ ಜನಕ್ಕೆ ತಿಳಿದಿರಬೇಕು. ಒಂದು ಮಾತು ಮಾತ್ರ ಸತ್ಯ, ಜನರಿಗೆ ಸರ್ಕಾರದ ಕೆಲಸವೇನು ಮತ್ತು ತಮ್ಮನ್ನು ಪ್ರತಿನಿಧಿಸುವವರ ಕೆಲಸವೇನು ಅನ್ನುಅವದರ ಬಗ್ಗೆ ತಿಳಿದೇ ಇಲ್ಲ ಇದರಬಗ್ಗೆ ಜನರಿಗೆ ಅರಿವು ಮೂಡಿಸುವುದು ತುಂಬಾ ಮುಖ್ಯ ಅಂದನಿಸುತ್ತದೆ. ಒಬ್ಬ MLA ಎಲೆಕ್ಷನ್ ಗಾಗಿ ಓಟು ಕೇಳಲು ಬಂದರೆ ಆ ಮಹಾಶಯನಿಗೆ ಒಂದು ವೇಳೆ ತಾನು ಗೆದ್ದರೆ ತನ್ನ ಕೆಲಸವೇನು ಅಂತಾನೆ ಗೊತ್ತಿರುವದಿಲ್ಲ. ಬರಿ ಕಾಂಟ್ರಾಕ್ಟ್ ದುಡ್ಡನ್ನು ತಿಂದು ತೇಗುವ ಉದ್ದೇಶದಿಂದಲೇ ರಾಜಕೀಯಕ್ಕೆ ಬಂದಿರುತ್ತಾರೆ. ನೀವು ಹೇಳಿದಂತೆ ಒಂದು ಪರೀಕ್ಷೆ ಅಂತಿದ್ದರೆ ಅವನಿಗೆ ಗೊತ್ತಾದರೂ ಆಗಿರುವದು ತನ್ನ ಗುರಿ ಏನಿರಬೇಕು ಅಂತ. ಇನ್ನು ಸರ್ಕಾರದ ಕೆಲಸ ಬರಿ ಬಜೆಟ್ ಬಿಡುಗಡೆ ಮಾಡುವದಷ್ಟೇ ಅಲ್ಲ ಅದನ್ನು ಟ್ರ್ಯಾಕ್ ಮಾಡಬೇಕು.

                 ರಾಜಕಾರಣಿಗಳು ಯಾವಾಗ ಜನರಿಗೆ ಹೆದರುತ್ತಾರೋ ಅವತ್ತೇ ನಮ್ಮ ದೇಶ ಪ್ರಗತಿಯತ್ತ ಸಾಗುತ್ತಿದೆ ಅಂದರ್ಥ. (ಸಧ್ಯದ ಪರಸ್ಥಿತಿಯಂತೂ ಹಾಗಿಲ್ಲ). ನಿಮ್ಮಿಂದ transparent ಪ್ರಜಾವ್ಯವಸ್ಥೆಯ ನಿರೀಕ್ಷೆಯಲ್ಲಿದ್ದೇವೆ. ಯಶಸ್ಸಿಗಾಗಿ ಯಾವದೇ ಪಕ್ಷದೊಂದಿಗೆ ಹೊಂದಾಣಿಕೆ ಬೇಡ, ಅವಸರ ಬೇಡ, ನೀವೇ ಹೇಳಿದಂತೆ ಕೆಲಸ ಮಾಡೋಣ ಫಲಾ ಫಲ ಆ ಭಗವಂತನಿಗೆ ಬಿಟ್ಟಿದ್ದು. ಹೇಗೆ ಆಮ್ ಅದಾಮಿ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿತೋ ಹಾಗೆ ಅವಸರಕ್ಕೆ ಬಿದ್ದು ಯಾವ ನಿರ್ಧಾರ ತಗೆದುಕೊಳ್ಳಬೇಡಿ. ನಿಧಾನವೇ ಪ್ರಧಾನ ಅಂತ ಹೇಳುವದು ಇದಕ್ಕೆ ಅಲ್ಲವೇ☺

ನಿಮ್ಮ/ನಮ್ಮ ಪ್ರಜಾಕಿಯ ಜರ್ನಿ ಗೆ ನಿಮ್ಮ ಅಭಿಮಾನಿಯ ಬೆಂಬಲ ಯಾವಾಗಲೂ ಇದೆ.

ಇಂತಿ ನಿಮ್ಮ ಅಭಿಮಾನಿ,
MD ಹರೀಶ್
+919035465621

Comments

  1. Hwduu..sir nimma maathu sathya navella prajakiyadalli kelasamadalu siddariddeve adre yavude pakshada jothe oppandabeda mathu avasabeda sir..

    ReplyDelete

Post a Comment

Popular posts from this blog

ಭಾರತಕ್ಕೆ ಪಾಶ್ಚಿಮಾತ್ಯ "ಡೆ" ಗಳ ಅವಶ್ಯಕತೆ ಉಂಟಾ?!

ಮಾತೇ ಮಾಣಿಕ್ಯ !

ಸೀತೆ ಆ ಜಿಂಕೆಯನ್ನು ಬಯಸಿದ್ದೇಕೆ ?