Posts

ಉಪ್ಪಿಗೊಂದು ಪತ್ರ

Image
ಪ್ರೀತಿಯ ಉಪೇಂದ್ರ ಸರ್,,            ನೆನ್ನೆ ನಿಮ್ಮ ಆಡಿಯೋ ಒಂದನ್ನು ಕೇಳಿ ತುಂಬಾ ಖುಷಿಯಾಯಿತು. " Alternate Politics " / "ಪ್ರಜಾಕೀಯ"ದ ನಿಮ್ಮ ಮಾತುಗಳು, ರಾಜಕೀಯ ಮಾತುಗಳು ಅಂತನಿಸಲಿಲ್ಲ (ರಾಜಕಾರಣಿಗಳು ಈ ಮಾತುಗಳನ್ನಾಡಲು ಸಾಧ್ಯವೇ ಇಲ್ಲ ಬಿಡಿ ಆ ಪ್ರಶ್ನೆ ಬೇರೆ). ಸ್ವಚ್ಛ ಮನಸ್ಸಿನಿಂದ ಸಮಾಜಕ್ಕೆ ಒಂದೊಳ್ಳೆ ಕೆಲಸ ಮಾಡೋಣ ನೀವುಗಳೂ ಕೈಜೋಡಿಸಿ ಅಂತ ನೀವು ನೀಡಿದ ಕರೆಗೆ ನನ್ನ ಬೆಂಬಲವಿದೆ.              ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ನಮಗೆ ನೀಡಿದ ದೊಡ್ಡ ಉಡುಗುರೆ " Divide and Rule " (ವೊಡೆದು ಆಳುವ ನೀತಿ). ಇದನ್ನೇ ನಮ್ಮ ರಾಜಕಾರಣಿಗಳು ಮಾಡಿದ್ದೂ, ಮತ್ತು ಮಾಡುತ್ತಿರುವದು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನನ್ನೆಲ್ಲ ಮಾಡಿದ್ದಾರೆ ಅಂತ ಪ್ರತಿಯೊಬ್ಬರಿಗೂ ಗೊತ್ತಿದೆ! ಯುವ ಪೀಳಿಗೆ ಇದರಿಂದ ಬೇಸತ್ತಿದೆ. ಭ್ರಷ್ಟರಲ್ಲೇ ಕಡಿಮೆ ಭ್ರಷ್ಟರನ್ನು ಆರಿಸಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ.   ರಾಜಕೀಯ ಜೀವನದುದ್ದಕ್ಕೋ ಕೆಟ್ಟ/ ಸ್ವಾರ್ಥ ಕೆಲಸವನ್ನೇ ಮಾಡಿಕೊಂಡಿದ್ದು (ಬೆರಳೆಣಿಕೆಯಷ್ಟು ರಾಜಕಾರಣಿಗಳು ಇದಕ್ಕೆ ಹೊರತು), ತಾವು ಬೆಳೆದು ದೊಡ್ಡವರಾಗುತ್ತಾರೆಯೇ ವಿನಃ ಜನರು ಅಲ್ಲೇ ಇರುತ್ತಾರೆ.                 ಮತದಾನ ಅನ್ನುವ ಪದದಲ್...

"ಪಂಚ" ಕಜ್ಜಾಯ

Image
ಶಹಭಾಷ್! ಮೆಚ್ಚಲೇಬೇಕು.. ಊಟ ಮಾಡಿದರಾಯಿತು ಬಿಟ್ಟರಾಯಿತು .. ನಿದ್ದೆ ಮಾಡಿದರಾಯಿತು ಬಿಟ್ಟರಾಯಿತು.. ಗೆಲ್ಲಲೇ ಬೇಕು ಅಂತ ಪಣತೊಟ್ಟು ಗೆದ್ದು ತೋರಿಸಿದ ಅಮಿತ್ ಶಾ ಮತ್ತು ಮೋದಿ ಜೋಡಿ ಸಾಧನೆ ಅಷ್ಟಿಷ್ಟಲ್ಲ.. ಪಂಜಾಬ್ ಮತ್ತು ಗೋವಾ ದಲ್ಲಿ ಅಧಿಕಾರ ಕಳೆದುಕೊಂಡಿದ್ದು ಬೇಸರವೆನ್ನಿಸದ ರೀತಿಯಲ್ಲಿ ಉತ್ತರ ಪ್ರದೇಶದ ಜನ ಬಿಜೆಪಿಯನ್ನು ಗೆಲ್ಲಿಸುವದರ ಮೂಲಕ ದೊಡ್ಡ ಉಡುಗರೆಯನ್ನೇ ಕೊಟ್ಟಿದ್ದಾರೆ. ನಿಜ ಹೇಳಬೇಕಾದರೆ ಬಿಜೆಪಿ ಕೂಡ ಇಷ್ಟೊಂದು ದೊಡ್ಡಮಟ್ಟದ ಗೆಲುವು ತಮ್ಮದಾಗುತ್ತದೆ ಅಂತ ಊಹಿಸಿರಲೂ ಸಾಧ್ಯವಿಲ್ಲ ಬಿಡಿ.                           ನನಗನ್ನಿಸುವ ಪ್ರಕಾರ ಬಿಜೆಪಿ ಇದನ್ನು ಪಾಸಿಟಿವ್ ಆಗಿ ತಗೆದುಕೊಳ್ಳದೆ ಇದ್ದಾರೆ ಒಳ್ಳೆಯದು. ಕೇಳಬಹುದು ಅದು ಹೇಗೆ ಅಷ್ಟು easy ಆಗಿ ಹೇಳುತ್ತಿದ್ದೀರಾ, ಇದೇನು ಸಾಧನೆ ಅಲ್ಲವೇ ಅಂತ. ಪಂಚ ರಾಜ್ಯಗಳ ಫಲಿತಾಂಶ ನೋಡಿದಾಗ ಹಾಗನ್ನಿಸುತ್ತದೆ. ಆ ರಾಜ್ಯಗಳ ಸರ್ಕಾರಗಳ ಆಡಳಿತ ಸರಿ ಅನ್ನಿಸದೆ ಬೇರೆಯವರಿಗೆ ಅಧಿಕಾರ ಕೊಟ್ಟು ನೋಡೋಣ ಅಂತ ಜನರು ಆರಿಸಿದ ದಾರಿ ಅಷ್ಟೇ. ಹಾಗೆ ಮೋದಿ ಅಲೆ ಇನ್ನು ಇದೆ ಅನ್ನುವದದಲ್ಲಿ ಮಣಿಪುರ ಗೋವಾ ಮತ್ತು ಪಂಜಾಬ್ ನಲ್ಲಿಕೂಡ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಬೇಕಿತ್ತು.     ...